ಮಂಜೇಶ್ವರ: ವರ್ಕಾಡಿಯ ನಲ್ಲೆಂಗಿಯ ಹಿಲ್ಡಾ ಮೊಂತೇರೋ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮೆಲ್ವಿನ್ ವಿಚಾರಣೆ ವೇಳೆ ಸತ್ಯ ಬಾಯ್ದಿಟ್ಟಿದ್ದಾನೆ.

ಆರೋಪಿಯು ಪಾನಮತ್ತನಾಗಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ತನಗೆ ವಿವಾಹ ಮಾಡಿಕೊಡಬೇಕು. ಇದಕ್ಕಾಗಿ ಹಣ ನೀಡುವಂತೆ ಮೆಲ್ವಿನ್ ತಾಯಿಯಲ್ಲಿ ಒತ್ತಡ ಹಾಕುತ್ತಿದ್ದನು. ಇದಲ್ಲದೆ ಆಸ್ತಿಯನ್ನು ವಿವಾಹದ ಬಳಿಕ ತನ್ನ ಹೆಸರಿಗೆ ಬರೆದು ಕೊಡುವಂತೆ ಒತ್ತಡ ಹೇರಿದ್ದು, ಇದಕ್ಕೆ ತಾಯಿ ಹಿಲ್ಡಾ ಡಿಸೋಜ ಒಪ್ಪದೇ ಇದ್ದಾಗ ಈ ದುಷ್ಕೃತ್ಯ ಮೆರೆದಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

