Breaking
8 Aug 2026, Sat

ಅನುಗ್ರಹ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಉಜಿರೆ : ಅನುಗ್ರಹ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜೂ.27 ರಂದು ಅನುಗ್ರಹ ಸಭಾಭವನದಲ್ಲಿ ಜರುಗಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂ ಫಾ ಅಬೆಲ್ ಲೋಬೊ, ಮುಖ್ಯ ಅತಿಥಿಯಾಗಿ ಹಾಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಮರ್ಲಿನ್ ಡಿಸೋಜಾಇವರು ಭಾಗಿಯಾಗಿದರು. ಯುವ ನಾಯಕತ್ವದ ಭದ್ರತೆ ಕರ್ತವ್ಯ, ಜವಾಬ್ದಾರಿ ಹಾಗೂ ಅದರ ಅಗತ್ಯದ ಬಗ್ಗೆ ಮತ್ತು ಶಾಂತಿ ಸೌಹಾರ್ದತೆಯಿಂದ ರಾಷ್ಟ್ರಾಭಿಮಾನವನ್ನು ಮೈಗೂಡಿಸಿ ಇಂದಿನ ಯುವಪೀಳಿಗೆ ಬೆಳೆಯಬೇಕಾಗಿದೆ ಎಂದು ಸಂಚಾಲಕರಾದ ವಂ ಫಾ ಅಬೆಲ್ ಲೋಬೊ, ಮುಖ್ಯ ಅತಿಥಿಯಾದ ಮರ್ಲಿನ್ ಡಿಸೋಜಾ ಎಂದು ತಿಳಿಸಿದರು.

ಹೊಸದಾಗಿ ಆಯ್ಕೆಯಾದ ಶಾಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮಂತ್ರಿಮಂಡಲದ ನೂತನ ಸದಸ್ಯರಿಗೆ ಶಾಲಾ ಪ್ರಾಂಶುಪಾಲರಾದವಂ ಫಾ ವಿಜಯ್ ಲೋಬೋ ಇವರ ಪ್ರಮಾಣ ವಚನವನ್ನು ಬೋಧಿಸಿದರು.

ಪ್ರೌಢಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ ಮಿಶೆಲ್ ಪಿಂಟೋ, ಉಪನಾಯಕನಾಗಿ ಶೌರ್ಯ ಕಾಮತ್‌ ಪ್ರಾಥಮಿಕ ಶಾಲಾ ವಿದ್ಯಾರ್ಥಿಯ ನಾಯಕಿಯಾಗಿ ಕುಮಾರಿ ಸಿಂಚನ ಉಪನಾಯಕನಾಗಿ ಸುಹಾನ್ ಮೊಂತೆರೊ ಹಾಗೂ ಇವರ ಜೊತೆಯಲ್ಲಿ ಮಂತ್ರಿಮಂಡಲದ ಇತರ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.

ಪ್ರಾಂಶುಪಾಲರಾದ ವಂ ಫಾ ವಿಜಯ್ ಲೋಬೊ ಇವರು ಮಂತ್ರಿಮಂಡಲದ ಸದಸ್ಯರಿಗೆ ತಮ್ಮ ಕರ್ತವ್ಯದ ಬಗ್ಗೆ ತಿಳಿಸಿದರು. ಪ್ರಮಾಣವಚನ ಸ್ವೀಕರಿಸಿದ ಮಂತ್ರಿಮಂಡಲದ ಸರ್ವಸದಸ್ಯರಿಗೆ ಶುಭವನ್ನು ಹಾರೈಸಿದರು. ಸಹಶಿಕ್ಷಕಿ ವಿನಯಲತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *