ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ ದಂಪತಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ತಂತಿಯಲ್ಲಿ ಒಣಗಿಸಲು ಹಾಕಿದ್ದ ಬಟ್ಟೆ ತೆಗೆಯಲು ವಿನೋದಾ ಹೋದಾಗ ಶಾಕ್ ಹೊಡೆದಿದ್ದು ,ಆಕೆಯನ್ನು ರಕ್ಷಿಸಲು ಮುಂದಾದ ಪತಿ ಕೃಷ್ಣಪ್ಪರಿಗೂ ಶಾಕ್ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ವೇಳೆ ಪಕ್ಕದ ಮನೆಯ ಮಂಜುನಾಥ್ ರಕ್ಷಣೆಗಾಗಿ ಧಾವಿಸಿದ್ದು, ಅವರಿಗೆಲೂ ವಿದ್ಯುತ್ ಶಾಕ್ ಹೊಡೆದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳೆಯಿಂದಾಗಿ ತಂತಿ ತೇವಗೊಂಡಿದ್ದಾಗ ಮನೆಯ ವಿದ್ಯುತ್ ಮೋಟಾರ್ ವೈರ್‌ಗಳು ಕಬ್ಬಿಣದ ತಂತಿಗೆ ತಗುಲಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ದಂಪತಿಯು ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.
ಈ ಕುರಿತು ಸೊರಬ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.


