ಗುರುಪೂರ್ಣಿಮಾ ಪ್ರಯುಕ್ತ ಪ್ರಸೂತಿ ತಜ್ಞೆ ವೆಂಕಮ್ಮರಿಗೆ ಬಿಜೆಪಿ ವತಿಯಿಂದ ಗೌರವರ್ಪಣೆ


ಬಂಟ್ವಾಳ: ತಾಲೂಕಿನ ಕೊಡಂಬೆಟ್ಟು ಪರಿಸರದಲ್ಲಿ ನೂರಾರು ಮಂದಿಗಳ ಬಾಳಿನಲ್ಲಿ ಬೆಳಕು ಪ್ರಜ್ವಲಿಸಿದ ಪ್ರಸೂತಿ ತಜ್ಞೆ ವೆಂಕಮ್ಮ ಎಂಬವರಿಗೆ ಗುರು ಪೂರ್ಣಿಮಾ ದಿನಾಚರಣೆಯ ಪ್ರಯುಕ್ತ. ಬಿಜೆಪಿ ವತಿಯಿಂದ ಪಕ್ಷದ ನಾಯಕಿ ಸುಲೋಚನ ಜಿ. ಕೆ. ಭಟ್ ಮುಂದಾಳುತ್ವದಲ್ಲಿ ಅವರ ಸ್ವಗ್ರಹಕ್ಕೆ ಭೇಟಿ ನೀಡಿ ಫಲ ಪುಷ್ಪ ಗಳೊಂದಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಮ್. ತುಂಗಪ್ಪ ಬಂಗೇರ, ಬಂಟ್ವಾಳ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರು, ಬೂತ್ ಪ್ರಧಾನ ಕಾರ್ಯದರ್ಶಿ ಕಿರಣ್ ಎರ್ಮೆನಾಡು, ಭಜನಾ ಮಂದಿರದ ಅಧ್ಯಕ್ಷರಾದ ಚೇತನ್ ಕುದುಕಂದೋಡಿ,ಪ್ರಮುಖರಾದ ವಿಜಯ ರೈ ಆಲದಪದವು, ಮೋಹನ್ ದಾಸ್ ಗಟ್ಟಿ, ಸುರೇಶ್ ಪೂಜಾರಿ, ರಾಮಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *