ಮಂಗಳೂರು: ನಗರದ ಬಜ್ಪೆಯಲ್ಲಿ ಜೂ.1 ರಂದು ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎ ಮತ್ತಷ್ಟು ತೀವ್ರಗೊಳಿಸಿದೆ.

ಇದೀಗ ಅದರ ಮುಂದುವರಿದ ಭಾಗವಾಗಿ ಬಂಧನವಾಗಿರುವ 12 ಮಂದಿ ಆರೋಪಿಗಳ ಅಕೌಂಟ್ ಗೆ ವಿದೇಶಿ ಹಣ ಹೊಡಿಕೆಯಾಗಿರುವ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಈ ಕುರಿತು ಎನ್ಐಎ ಡಿಐಜಿ ರಾಹುಲ್ ಹಾಗು ಎಸ್ಪಿ ಶಿವಕುಮಾರ್ ಅವರು ಅಧಿಕಾರಿಗಳಿಂದ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ತನಿಖೆ ನಡೆಸುತ್ತಿರುವ ಎನ್ಐಎ ಡಿಎಸ್ಪಿ ಪವನ್ ಕುಮಾರ್ ನೇತೃತ್ವದ ತಂಡಕ್ಕೆ ಸುಹಾಸ್ ಹತ್ಯೆಯಲ್ಲಿ ಭಾಗಿಯಾದ ಬಹುತೇಕರಿಗೆ ನಿಷೇಧಿತ ಪಿಎಫ್ಐ ನಂಟಿಗೆ ಸಾಕ್ಷ್ಯ ಲಭ್ಯವಾಗಿದ್ದು ,ಪಿಎಫ್ಐ ಜೊತೆ ಗುರುತಿಸಿಕೊಂಡು ವಿದೇಶದಲ್ಲಿರೋ ಕೆಲವರಿಂದ ಹತ್ಯೆಗೆ ಹಣಕಾಸು ನೆರವಿನ ಅಂಶ ಬೆಳಕಿಗೆ ಬಂದಿದೆ.

ಈ ಕುರಿತು ಎನ್ಐಎ ಅಧಿಕಾರಿಗಳ ತಂಡ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಮಂಗಳೂರು ಹಾಗೂ ವಿದೇಶದಲ್ಲಿ ಕೂತು ನೆರವು ನೀಡಿದ ಹಲವರ ಹೆಸರನ್ನು ಬಾಯಿಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ. ಹತ್ಯೆಗೆ ನೆರವು ನೀಡಿದ ಮತ್ತೊಂದಷ್ಟು ಜನರ ಖಚಿತ ಮಾಹಿತಿ ಕಲೆ ಹಾಕಿರೋ ಅಧಿಕಾರಿಗಳು ಬಂಧನಕ್ಕೆ ಬಲೆ ಬೀಸಿದ್ದಾರೆ.

