Breaking
14 Jul 2026, Tue

ಮೂಡಬಿದ್ರೆ-ಬಂಟ್ವಾಳ ಮುಖ್ಯ ರಸ್ತೆಯ ತಾಕೊಡೆಯಲ್ಲಿ ಧರೆಗುರುಳಿದ ಮರ: ವಾಹನ ಸಂಚಾರ ಅಸ್ತವ್ಯಸ್ತ

ಮೂಡಬಿದ್ರೆ: ಭಾರಿ ಮಳೆಯ ಪರಿಣಾಮ ಮೂಡಬಿದ್ರೆ – ಬಂಟ್ವಾಳ ಮುಖ್ಯ ರಸ್ತೆಯ ತಾಕೊಡೆ ಎಂಬಲ್ಲಿ ಮರ ಉರುಳಿ ಬಿದ್ದು ಒಂದು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತ್ಯವಾಯಿತು.

ಮರ ಉರುಳಿ ಬಿದ್ದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ನಂತರ ಮರ ತೆರವುಗೊಳಿಸಿದ್ದು ಬಳಿಕ ಸಂಚಾರ ಪುನಃ ಸಾಧ್ಯವಾಯಿತು.

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಈ ರೀತಿಯ ಸಮಸ್ಯೆ ನಿರಂತರವಾಗಿದ್ದು, ವಾಹನ ಸವಾರರು, ಸಾರ್ವಜನಿಕರು ಸಮಸ್ಯೆಯನ್ನು ಎದುರಿಸುತ್ತಿದ್ದು ಸಂಭಂದಪಟ್ಟ ಅಧಿಕಾರಿಗಳು ಇದರತ್ತ ಗಮನಹರಿಸಬೇಕಾಗಿದೆ.

Leave a Reply

Your email address will not be published. Required fields are marked *