Breaking
12 May 2026, Tue

ಬಂಟ್ವಾಳ: ಮನೆ ಮೇಲೆ ಉರುಳಿ ಬಿದ್ದ ಬೃಹತ್ ಮರ: ಧನೂಪೂಜೆ ಶೌರ್ಯ ಘಟಕ ತಂಡದಿಂದ ಮರ ತೆರವು

ಬಂಟ್ವಾಳ: ಭಾರಿ ಗಾಳಿ ಮಳೆಗೆ ಧನೂಪೂಜೆ ‌ಒಕ್ಕೂಟದ‌ ತತ್ವಮಸಿ ಸಂಘದ ತಿಲಕ್ ರವರ ಮನೆಗೆ‌, ಬೃಹತ್ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ.

ವಿಚಾರ ತಿಳಿದು ಘಟನಾ ಸ್ಥಳಕ್ಕೆ ಧರ್ಮಸ್ಥಳ ವಿಪತ್ತು ನಿರ್ವಹಣಾ ಶೌರ್ಯ ಧನೂಪೂಜೆ ಘಟಕದ ಸದಸ್ಯರು ತಕ್ಷಣ ಸ್ಥಳಕ್ಕೆ ಧಾವಿಸಿ ‌ಮನೆಗೆ ಬಿದ್ದ ಮರವನ್ನು ತಕ್ಷಣ ಕಡಿದು ತೆರವುಗೊಳಿಸುವ ಕಾರ್ಯವನ್ನು ಶುಕ್ರವಾರ ಮಾಡಿದರು.

ಈ ಕಾರ್ಯದಲ್ಲಿ ಘಟಕದ ಪ್ರತಿನಿಧಿ ಜಗದೀಶ್ ಆಚಾರ್ಯ, ಸದಸ್ಯರಾದ ಪ್ರಶಾಂತ್ ಧನೂಪೂಜೆ, ಗಣೇಶ ಆಚಾರ್ಯ, ದಿನೇಶ್ ಆಚಾರ್ಯ, ಪ್ರಶಾಂತ್ ಆಚಾರ್ಯ, ಪ್ರಮೋದ್ ಆಚಾರ್ಯ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *