ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ: ಫೋಟೋ ವೈರಲ್

ಕೊಪ್ಪಳ: ಮುಸ್ಲಿಂ ಮಹಿಳೆಯೊಬ್ಬರು ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿ ಹಸೀನಾ ಬೇಗಂ ನಾಗ ದೇವರ ಮುಂದೆ ಧ್ಯಾನಕ್ಕೆ ಕುಳಿತ ಮಹಿಳೆಯಾಗಿದ್ದು, ಇಲ್ಲಿನ ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತುಕೊಳ್ಳುವ ಮಹಿಳೆ ಎಲ್ಲರ ಗಮನ ಸೆಳೆದಿದ್ದಾರೆ.

ಹಸೀನಾ ಬೇಗಂ ಕಳೆದ ಎಂಟು ದಿನಗಳಿಂದ ಗವಿ ಮಠಕ್ಕೆ ಬಂದು ಧ್ಯಾನ ಮಾಡುತ್ತಿದ್ದಾರೆ. ಗವಿ ಮಠದಲ್ಲಿ ನಿರಂತರ ಒಂದು ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳೆ ನನ್ನ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಇಲ್ಲಿ ಧ್ಯಾನಕ್ಕೆ ಕೂರುತ್ತೇನೆ ಎಂದು ಗವಿಮಠದ ಶ್ರೀಗಳನ್ನು ಕೇಳಿದ್ದೆ. ನಿನ್ನ ಮನಸ್ಸಿಗೆ ನೆಮ್ಮದಿ ಸಿಗುವುದಾದರೆ ಕೂರು ಎಂದು ಹೇಳಿದ್ದರು.

ನಾನು 2013ರಿಂದ ಮಠಕ್ಕೆ ಬರುತ್ತಿದ್ದೇನೆ. ನನಗೆ ಸಮಯ ಸಿಕ್ಕಾಗೆಲ್ಲ ಇಲ್ಲಿಗೆ ಬಂದು 10 ನಿಮಿಷ ಕುಳಿತುಕೊಂಡು ಹೋಗುತ್ತೇನೆ. ನನಗೆ ಕಷ್ಟ ಇತ್ತು ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಎಂಟು ದಿನಗಳ ಹಿಂದೆ ನನಗೆ ನಿಲ್ಲಲು ಆಗುತ್ತಿರಲಿಲ್ಲ. ನಾನು ಇಲ್ಲಿಗೆ ಬಂದ ವೇಳೆ ಜೋರು ಮಳೆ ಬರುತ್ತಿತ್ತು.

ಆ ಮಳೆಯಲ್ಲೇ ಧ್ಯಾನಕ್ಕೆ ಕುಳಿತುಕೊಂಡೆ. ಇವತ್ತು ನನ್ನ ಮನಸ್ಸಿಗೆ ನೆಮ್ಮದಿ ಅನಿಸಿದೆ. ಹಿಂದೂ – ಮುಸ್ಲಿಮ್ಸ್ ಅನ್ನೋದು ನನ್ನಲಿಲ್ಲ. ಇದು ನಮ್ಮ ಮಠ. ನನಗೆ ಬಹಳ ನೋವಾಗಿತ್ತು. ಶ್ರೀಗಳು ಕೂರುವ ಜಾಗದ ಎದುರಿನ ಜಾಗ ನನಗೆ ಬಹಳ ಇಷ್ಟ ಆಯಿತು.

ಅದಕ್ಕೆ ಅಲ್ಲೇ ಧ್ಯಾನಕ್ಕೆ ಕುಳಿತೆ. ಪ್ರತಿನಿತ್ಯ ಒಂದು ಗಂಟೆ ಧ್ಯಾನಕ್ಕೆ ಕುಳಿತುಕೊಳ್ಳುತ್ತೇನೆ. ಸೋಮವಾರದ ತನಕ ಧ್ಯಾನ ಮುಂದುವರೆಸುತ್ತೇನೆ. ಮಾನಸಿಕ ನೆಮ್ಮದಿಗಾಗಿ ಇಲ್ಲಿ ಧ್ಯಾನ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *