Breaking
19 Sep 2026, Sat

ಖ್ಯಾತ ಯಕ್ಷಗುರು ಬಣ್ಣದ ವೇಷಧಾರಿ ಪಿ.ವಿ. ಪರಮೇಶ್ ನಿಧನ

ಮಂಗಳೂರು: ಅಲ್ಪಕಾಲದ ಅನಾರೋಗ್ಯದಿಂದ ಯಕ್ಷಗಾನ ರಂಗದ ಖ್ಯಾತ ಹವ್ಯಾಸಿ ಬಣ್ಣದ ವೇಷಧಾರಿ, ಹಿಮ್ಮೇಳ ಮುಮ್ಮೇಳಗಳ ಸವ್ಯಸಾಚಿ ಕಲಾವಿದ, ಅಂತಾರಾಷ್ಟ್ರೀಯ ಖ್ಯಾತಿಯ ಯಕ್ಷಗುರು ಪಿ.ವಿ. ಪರಮೇಶ್ (63) ಶುಕ್ರವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಮಂಗಳೂರು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಡಾ. ಎಂ. ಪ್ರಭಾಕರ ಜೋಶಿ, ಪ್ರದೀಪ್ ಕುಮಾರ್ ಕಲ್ಕೂರ, ಶರತ್ ಕದ್ರಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *