Breaking
14 Jul 2026, Tue

ಪುತ್ತೂರಿನ ಕೋರ್ಟ್ ರೋಡ್ ರಿಕ್ಷಾ ನಿಲ್ದಾಣದಲ್ಲಿ ವ್ಯಕ್ತಿಗೆ ಹಲ್ಲೆ

ಪುತ್ತೂರು: ಕೋರ್ಟ್ ರೋಡ್ ರಿಕ್ಷಾ ನಿಲ್ದಾಣದ ಬಳಿ ಐಐಎಫ್‍ಎಲ್ ಫೈನಾನ್ಸ್ ನ ಮ್ಯಾನೇಜರ್ ಪ್ರಸಾದ್ ಗೌಡ ಎಂಬವರು ಹರೀಶ್ ಕುಮಾರ್ ಹೆಗ್ಡೆ ಎಂಬವರಿಗೆ ಗಂಭೀರವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಪುತ್ತೂರಿನ ಉರ್ಲಾಂಡಿ ನಿವಾಸಿ ಹರೀಶ್ ಕುಮಾರ್ ಹೆಗ್ಡೆ (52) ಎಂದು ಗುರುತಿಸಲಾಗಿದ್ದು, ಈ ಹಿಂದೆ ಕಡಬದಲ್ಲಿ ಗ್ರಾಮಾಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಹರೀಶ್ ಕುಮಾರ್ ಹೆಗ್ಡೆ ಅವರ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಟಿಕ್ ನಲ್ಲಿ ಹೊಡೆದ ಪರಿಣಾಮ ತಲೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದೆ. ಈ ಮಧ್ಯೆ ಹಲ್ಲೆಗೊಳಗಾದ ಹರೀಶ್ ಕುಮಾರ್ ಹೆಗ್ಡೆ ಕೂಡ ನನ್ನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪ್ರಸಾದ್ ಗೌಡ ಆರೋಪಿಸಿದ್ದಾರೆ.

ಗಾಯಳುಗಳನ್ನು ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಪುತ್ತೂರು ಆಸ್ಪತ್ರೆಗೆ ಪುತ್ತೂರು ನಗರ ಠಾಣಾ ಇನ್ಸ್ ಪೆಕ್ಟರ್ ಆಂಜನೇಯ ರೆಡ್ಡಿ, ಉಪನಿರೀಕ್ಷಕ ಜಾನ್ಸನ್ ಡಿಸೋಜ ಭೇಟಿ ನೀಡಿ ಹಲ್ಲೆಗೊಳಗಾದ ವ್ಯಕ್ತಿಯಿಂದ ಮಾಹಿತಿ ಪಡೆದು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *