ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಹಿಂದುಳಿದ ವರ್ಗಗಳ ಮೋರ್ಚ ವತಿಯಿಂದ ಸಂಗಬೆಟ್ಟು ಮಹಾಶಕ್ತಿ ಕೇಂದ್ರದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಜಯರಾಮ ಅಡಪ ಮತ್ತು ಅವರ ಧರ್ಮಪತ್ನಿ ಯಶೋಧ ಅಡಪ ಇವರನ್ನು ಶಾಲು ಹಾಕಿ ಫಲಪುಷ್ಪ ಹಾಗೂ ಗಿಡವನ್ನು ನೀಡುವುದರ ಮೂಲಕ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಕೊಟ್ಟಾರಿ, ಉಪಾಧ್ಯಕ್ಷರಾದ ಸುನಿಲ್ ಶೆಟ್ಟಿಗಾರ್, ಸಂಗಬೆಟ್ಟು ಮಹಾಶಕ್ತಿ ಕೇಂದ್ರಅಧ್ಯಕ್ಷರಾದ ಸತೀಶ್ ಪೂಜಾರಿ ಅಳಕೆ, ಶಕ್ತಿಕೇಂದ್ರದ ಪ್ರಮುಖ ನವೀನ್ ಹೆಗ್ಡೆ, ಸಂಗಬೆಟ್ಟು ಬೂತ್ 6ರ ಅಧ್ಯಕ್ಷರಾದ ವಿನೋದ್ ಅಡಪ, ಕಾರ್ಯದರ್ಶಿ ಪ್ರವೀಣ್ ರೂಡಲ್ಪು, ಪಕ್ಷದ ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಶೆಟ್ಟಿಗಾರ್ ಅಮ್ಮು ಕೋಟ್ಯಾನ್, ಮಾದವ ಶೆಟ್ಟಿಗಾರ್, ಸುಂದರ ಶೆಟ್ಟಿಗಾರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.



