Breaking
25 Sep 2026, Fri

ಧರ್ಮಸ್ಥಳದಲ್ಲಿ ಅಕ್ರಮ ಮರಳು ಸಾಗಾಟ, ಮೂವರ ವಿರುದ್ಧ ದೂರು ದಾಖಲು

ಧರ್ಮಸ್ಥಳ: ಅಕ್ರಮ ಮರಳು ಸಾಗಾಟಕ್ಕೆ ಯತ್ನಸಿದವರಿಗೆ ಧರ್ಮಸ್ಥಳ ಠಾಣೆಯ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೋಹನ್, ಆನಂದ್ ಇಬ್ರಾಹಿಂ ಎಂಬವರ ವಿರುದ್ದ ದೂರು ದಾಖಲಾಗಿದೆ.

ಆರೋಪಿಗಳು ಮುಂಡಾಜೆ ಗ್ರಾಮದ ಗುಂಡಿ ವನದುರ್ಗ ದೇವಸ್ಥಾನದ ರಸ್ತೆಯಲ್ಲಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡ ಈ ಕಾರ್ಯಾಚರಣೆ ನಡೆಸಿತ್ತು.

Leave a Reply

Your email address will not be published. Required fields are marked *