Breaking
24 Jun 2026, Wed

ಬೆಳ್ತಂಗಡಿಯಲ್ಲಿ ಬೈಕ್ ಡಿಕ್ಕಿ, ವಿದ್ಯಾರ್ಥಿನಿ ಮತ್ತು ಸವಾರ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ರಸ್ತೆ ದಾಟುತ್ತಿರುವ ವೇಳೆ ಇಬ್ಬರು ವಿದ್ಯಾರ್ಥಿನಿಯರಿಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಬೆಳ್ತಂಗಡಿ ತಾಲೂಕು ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಳೆಕೋಟೆ ವಾಣಿ ಕಾಲೇಜು ಸಮೀಪ ಜ. 6ರಂದು ನಡೆದಿದೆ.

ಗುರುವಾಯನಕೆರೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗಳಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ದ್ವಿಚಕ್ರ ಸವಾರ ಮತ್ತು ವಿದ್ಯಾರ್ಥಿನಿಯೊಬ್ಬಳ ತಲೆಯ ಭಾಗಕ್ಕೆ ಗಂಭೀರ ಪ್ರಮಾಣದ ಗಾಯಗಳಾಗಿದೆ. ಈ ವೇಳೆ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *