Breaking
23 Mar 2026, Mon

ವೀರಕಂಭ ಗ್ರಾಮ ಪಂಚಾಯತಿನ ಸಾಮಾನ್ಯ ಸಭೆ ಹಾಗೂ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆ

ಬಂಟ್ವಾಳ: ತಾಲೂಕು ವೀರಕಂಭ ಗ್ರಾಮ ಪಂಚಾಯತಿನ ಮಾಸಿಕ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷ ಲಲಿತ ರವರ ಅಧ್ಯಕ್ಷತೆಯಲ್ಲಿ ಡಿ. 6 ರಂದು ಜರಗಿತು.

ಸಭೆಯಲ್ಲಿ ಮುಖ್ಯವಾಗಿ ವಿಟ್ಲ ಹೋಬಳಿಗೆ ಸಂಬಂಧಿಸಿದಂತೆ ವಿಟ್ಲದಲ್ಲಿ ಅಗ್ನಿ ಶಾಮಕ ಠಾಣೆಯನ್ನು ತುರ್ತಾಗಿ ಮತ್ತು ಅವಶ್ಯವಾಗಿ ಸ್ಥಾಪಿಸುವಂತೆ ಸಂಬಂಧಪಟ್ಟವರಿಗೆ ಆಗ್ರಹಿಸಲು ನಿರ್ಣಯಿಸಲಾಯಿತು. ಅಲ್ಲದೇ ವೀರಕಂಭ ಗ್ರಾಮ ದಲ್ಲಿ ಖಾಲಿ ಇರುವ ಸಮುದಾಯ ಆರೋಗ್ಯಅಧಿಕಾರಿ ( ಸಿ ಹೆಚ್ ಒ) ನೇಮಕಕ್ಕೆ ಆಗ್ರಹಿಸುವಂತೆಯೂ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.

ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಪರವಾಗಿ ಗ್ರಾಮದಲ್ಲಿ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವವರನ್ನು ಗುರುತಿಸಿ ಗೌರವಿಸುವುದಾಗಿ ನಿರ್ಣಾಹಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಪಂಚಾಯತ್ ಸದಸ್ಯರುಗಳಾದ ದಿನೇಶ್ ಪೂಜಾರಿ, ಸಂದೀಪ್ ಪೂಜಾರಿ, ಜಯಪ್ರಸಾದ್, ಅಬ್ದುಲ್ ರೆಹಿಮಾನ್, ಜಯಂತಿ, ಗೀತಾ ಗಾಂಭೀರ್, ಮೀನಾಕ್ಷಿ, ಉಮಾವತಿ, ಶೀಲಾ ನಿರ್ಮಲ ವೇಗಸ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ, ಕಾರ್ಯದರ್ಶಿ ಶ್ರೀಮತಿ ಸವಿತಾ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನವೀನ್ ರಾಬರ್ಟ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ, ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *