Breaking
25 Sep 2026, Fri

ಉಡುಪಿ: ಕಾರ್ಕಳದ ಕಾಬೆಟ್ಟು ಅತ್ತೂರು ಚರ್ಚ್ ದ್ವಾರದ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಚೇರ್ಕಾಡಿ ಪೇತ್ರಿಯ ವಿನ್ಸೆಂಟ್ ಪ್ರಕಾಶ್ ಅಲ್ಮೇಡಾ (54) ಮತ್ತು ಲಾರಿ ಚಾಲಕ ಮುಡಾರು ಗ್ರಾಮದ ದಿಡಿಂಬಿರಿಯ ಸಮ್ಯೇಗ್ದ್ ಜೈನ್ (25) ಎಂದು ಗುರುತಿಸಲಾಗಿದೆ.

ಜ. 5ರಂದು ಅಕ್ರಮವಾಗಿ 3 ಯುನಿಟ್ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *