Breaking
25 Sep 2026, Fri

ಮಲ್ಪೆಯಲ್ಲಿ ಬೋಟಿನಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರ ಸಾವು

ಉಡುಪಿ: ಬೋಟಿನಿಂದ ಮೀನುಗಾರರೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಮಲ್ಪೆಯಲ್ಲಿ ನಡೆದಿದೆ.

ಮೃತರನ್ನು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಈರಯ್ಯ ನಾರಾಯಣ ನಾಯ್ಕ(55) ಎಂದು ಗುರುತಿಸಲಾಗಿದೆ.

ಈರಯ್ಯ ನಾರಾಯಣ ನಾಯ್ಕ ಜ.3ರಂದು ಅಳ ಸಮುದ್ರ ಮೀನುಗಾರಿಕೆ ಮುಗಿಸಿ ವಾಪಾಸ್ಸು ಬರುತ್ತಿದ್ದಾಗ ಮಲ್ಪೆ ಬಂದರಿನಿಂದ 16 ಮೈಲು ದೂರದ ಸಮುದ್ರದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಜ.4ರಂದು ಬೆಳಗ್ಗೆ ಈರಯ್ಯ ಅವರ ಮೃತದೇಹ ಸಮುದ್ರದಲ್ಲಿ ಪತ್ತೆ ಯಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *