ವೇಣೂರು: ದಿನಾಂಕ 16/11/2024 ರಂದು ಪೂರ್ವಾಹ್ನ 10:30 ಕ್ಕೆ ವೇಣೂರು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಸಿದ್ದಕಟ್ಟೆ ಇದರ ಅಧ್ಯಕ್ಷರಾದ ರೊ. ಶಿವಯ್ಯ ಎಸ್ ಎಲ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು
.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಮಕ್ಕಳೆಲ್ಲರಿಗೂ ಮಕ್ಕಳ ದಿನಾಚರಣೆ ಶುಭಾಶಯಗಳು ಕೋರಿದರು ಹಾಗೂ ಮಕ್ಕಳ ತಾಯಂದಿರನ್ನು ಉದ್ದೇಶಿಸಿ ಸ್ವಚ್ಛತೆ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಿಕೆ, ಮಕ್ಕಳಿಗೆ ಈಗಿನಿಂದಲೇ ಧೈರ್ಯ ತುಂಬಿ ಕ್ರಮವಾದ ವಿದ್ಯಾಭ್ಯಾಸವನ್ನು ನೀಡುವುದು ಹಾಗೂ ಹೆಣ್ಣು ಮಕ್ಕಳನ್ನು ಕಾಡುತ್ತಿರುವ ಗರ್ಭಕಂಠದ ಕ್ಯಾನ್ಸರ್ ರೋಗದ ಮಾಹಿತಿಯನ್ನು ನೀಡಿದರು.
ನಂತರ ಮಕ್ಕಳಿಗೆ ವಿವಿಧ ರೀತಿಯ ಸಿಹಿ ತಿಂಡಿಗಳನ್ನು ಹಂಚಲಾಯಿತು. ಮಕ್ಕಳು ಪ್ರಾರ್ಥನೆ ಮಾಡಿದರು, ಮಕ್ಕಳಿಂದ ಡ್ಯಾನ್ಸ್ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಬಾಲ ವಿಕಾಸ ಅಧ್ಯಕ್ಷರು, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಬಂಟ್ವಾಳದ ಯೋಜನಾಧಿಕಾರಿ ಜಯಾನಂದ, ಹಿರಿಯರಾದ ಭಾರತೀ, ಆಶಾ ಕಾರ್ಯಕರ್ತೆ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ವೇಣೂರು ಅಂಗನವಾಡಿ ಟೀಚರ್ ಹೇಮಲತಾ ಅವರು ನಿರೂಪಿಸಿದರು.