ಹೊಕ್ಕಾಡಿಗೋಳಿ:ಸ.ಉ.ಪ್ರಾ.ಶಾಲೆ ಹೊಕ್ಕಾಡಿಗೋಳಿ ಇದರ ಶಾಲಾ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ ಇಂದು ಶಾಲೆಯ ಸಭಾಂಗಣದಲ್ಲಿ ಜರುಗಿತು.
ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಹಳೇವಿದ್ಯಾರ್ಥಿ ಹಾಗೂ ಶಿಕ್ಷಕರು ಉಪಸ್ಥಿತಿಯಲ್ಲಿ ಈ ಸಭೆಯು ಜರುಗಿತು.ಸಭೆಯಲ್ಲಿ ಇದೇ ತಿಂಗಳ 13ರಂದು ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಪೂರ್ವತಯಾರಿಯ ಕುರಿತು ಚರ್ಚೆ ಮಾಡಲಾಯಿತು.ಶಾಲಾ ವಾರ್ಷಿಕೋತ್ಸವದ ಹಿನ್ನೆಲೆ ರಚಿಸಲಾದ ವಿವಿಧ ಸಮಿತಿಗಳ ಕಾರ್ಯ ದ ಪ್ರಗತಿಯ ಕುರಿತು ಚರ್ಚಿಸಲಾಯಿತು.
ಈ ಸಂಧರ್ಭದಲ್ಲಿ ವಾರ್ಷಿಕೋತ್ಸವದ ಅಧ್ಯಕ್ಷರಾದ ರೋ. ರಾಘವೇಂದ್ರ ಭಟ್, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕರಿಸುವಂತೆ ವಿನಂತಿಸಿದರು, ಉದ್ಯಮಿ ಕಿರಣ್ ಮಂಜಿಲ, ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಭಾಕರ ಹುಲಿಮೇರು,ಎಸ್ ಡಿ ಎಂ ಸಿ ಯ ದಿನೇಶ್ ಹುಲಿಮೇರು, ಹರೀಶ್ ಹಿಂಗಾಣಿ, ಸಂತೋಷ್ ಮಂಜಿಲ,ಶಶಿಧರ ಶೆಟ್ಟಿ ಕಲ್ಲಾಪು, ಬಾಲಕೃಷ್ಣ ಶೆಟ್ಟಿ ,ನಾಗೇಶ್ ಕುಂಜಾಡಿ, ದಿನಕರ ಕೆಪಡಿ,ಯೋಗೀಶ್ ಅಬ್ಬಂಜಲು ,ದಿನೇಶ್ ಹೆಣ್ಣೆರಡುಕವಳು , ನಿತೀಶ್ ಕುಂಜಾಡಿ, ಸದಾಶಿವ ಹುಲಿಮೇರು, ತಾಯಂದಿರ ಸಮಿತಿ, ಸೇರಿದಂತೆ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.