ವಾಮದಪದವು: ಇಲ್ಲಿನ ಪಾಂಗಲ್ಪಾಡಿ ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ಕಾರ್ತಿಕ ಮಾಸ ದ ಪ್ರಯುಕ್ತ ವಿಶೇಷ ‘ಕಾರ್ತಿಕ ದೀಪೋತ್ಸವ ಹಾಗೂ ರಂಗಪೂಜೆಯು’ ನಡೆಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಸುಮಾರು 5000ಕ್ಕೂ ಹೆಚ್ಚು ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಅದಲ್ಲದೆ ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸಿ ಅದನ್ನು ದೀಪಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು.
ನಂತರ ಭಜನಾ ಕಾರ್ಯಕ್ರಮವು ಜರುಗಿತು.