Breaking
21 Jun 2026, Sun

ಉಳ್ಳಾಲದಲ್ಲಿ ಹಠಾತ್ತನೇ ಕುಸಿದು ಬಿದ್ದು ವ್ಯಕ್ತಿ ಸಾವು

ಮಂಗಳೂರು: ವ್ಯಕ್ತಿಯೊಬ್ಬರು ಹಠಾತ್ತನೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ಮುಡಿಪುವಿನಲ್ಲಿ ಜ. 2 ರಂದು ನಡೆದಿದೆ.

ಮುಡಿಪು ಕೈರಂಗಳ ದುಗ್ಗಜ್ಜರಕಟ್ಟೆ ಸುಟ್ಟ ನಿವಾಸಿ ಎನ್.ಎಸ್. ಶರೀಫ್ (47) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ವೃತ್ತಿಯಲ್ಲಿ ಎಲೆಕ್ನಿಕ್ ಸಾಧನಗಳನ್ನು ಸರ್ವಿಸ್ ಮಾಡುತ್ತಿದ್ದ ಶರೀಫ್ ಅವರು ಮನೆ ಸಮೀಪ ಸರ್ವಿಸ್ ಶಾಪ್ ಹೊಂದಿದ್ದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಹೆಸರನ್ನು ಸಂಪಾದಿಸಿದ್ದರು.

ಶರೀಫ್ ಅವರು ಶುಕ್ರವಾರ ಕೈರಂಗಳ ತೋಟಾಲ್ ಜುಮ್ಮಾ ಮಸೀದಿಯಲ್ಲಿ ಜುಮಾ ಮುಗಿಸಿ ತುಂಬಾ ಸಂತಸದಲ್ಲಿದ್ದರು ಎನ್ನಲಾಗಿದ್ದು, ಹಠಾತ್ತನೇ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರ, ಪುತ್ರಿ, ತಂದೆ, ತಾಯಿ, ಮೂವರು ಸಹೋದರರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *