Breaking
22 Mar 2026, Sun

ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಹೋಮ್ ನರ್ಸ್ ಸಾವು

ಉಡುಪಿ: ಹೋಮ್ ನರ್ಸೊಬ್ಬರು ಕುರ್ಚಿಯ ಮೇಲೆ ಕೂತಲ್ಲಿಯೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಿನ್ನಿಮೂಲ್ಕಿ ಗರಡಿ ರಸ್ತೆಯಲ್ಲಿ ಜ.3 ರಂದು ನಡೆದಿದೆ.

ಹೊಮ್ ನರ್ಸ್ ಪ್ರದೀಪ್ ಅಜ್ಜರಕಾಡು(55) ಕುರ್ಚಿಯ ಮೇಲೆ ಕೂತಲ್ಲಿಯೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಪ್ರದೀಪ್ ಅವರು ತನ್ನ ಬಾಡಿಗೆ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು ಇದೇ ವೇಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಆಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಪರಿಕ್ಷೀಸಿದ ವೈದ್ಯರು ಪ್ರದೀಪ್ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.

ಮೃತರು ಸಮಾಜಮುಖಿಯಾಗಿದ್ದು, ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೇತ್ರತ್ವದಲ್ಲಿ ನಡೆಯುವ ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *