Breaking
6 May 2026, Wed

ನವೀಕರಣಗೊಂಡು ಶುಭಾರಂಭಗೊಂಡ ಮಡಂತ್ಯಾರ್ ನ ಹೊಟೇಲ್ ಅನಿಯ ದರ್ಬಾರ್

ಮಡಂತ್ಯಾರ್: ಶುಚಿ-ರುಚಿ, ವೈವಿಧ್ಯ ಖಾದ್ಯ, ಉತ್ತಮ‌ ಗುಣಮಟ್ಟದ ಆಹಾರಗಳನ್ನು ನೀಡಿ ಕಳೆದ 7 ವರ್ಷಗಳಿಂದ ಮಡಂತ್ಯಾರ್ ನ ಜನಮಾನಸದಲ್ಲಿ ಹೆಸರುವಾಸಿಯಾಗಿ, ಅನೇಕ ಗ್ರಾಹಕರ ಮನೆ ಮಾತಾಗಿರುವ ಹೊಟೇಲ್ ಅನಿಯ ದರ್ಬಾರ್ ನವೀಕರಣಗೊಂಡು ಜ.02ರಂದು ಶುಭಾರಂಭಗೊಂಡಿದೆ.

ಧರ್ಮಗುರುಗಳಾದ ಕಾಜೂರು ತಂಗಲ್ ರವರು ನವೀಕರಣಗೊಂಡ ಹೊಟೇಲ್‌ ಉದ್ಘಾಟಿಸಿ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವಲ್ಲಿ ಅನಿಯಾ ದರ್ಬಾರ್ ಹೊಟೇಲ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕ‌ ಗಣ್ಯಅತಿಥಿಗಳು ಹೊಟೇಲ್ ಮಾಲೀಕರಾದ ಹಂಝ ಎ. ಬಸ್ತಿಕೋಡಿ ಅವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಬೆಳೆಯುತ್ತಿರುವ ಮಡಂತ್ಯಾರ್ ಪೇಟೆಗೆ ಹಂಝ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಟೇಲ್ ಮರುನವೀಕರಣಗೊಂಡಿದೆ. ಹೊಟೇಲ್‌ ಉದ್ಯಮ ನಡೆಸುವುದರ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿರುವ ಇವರು ಅನೇಕ ಟ್ರಸ್ಟ್‌ ಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆತು ಸೌಹಾರ್ಧತೆ ಬೆಳೆಸಿಕೊಂಡಿದ್ದಾರೆ. ಹೊಟೇಲ್ ಅನಿಯ ದರ್ಬಾರ್ ರಾಜ್ಯಾದ್ಯಂತ ವಿಸ್ತಾರವಾಗಿ‌ ಬೆಳೆದು ಹಲವು ಶಾಖೆಗಳು ನಿರ್ಮಾಣವಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಇರ್ಷಾದ್ ದಾರಿಮಿ ಮಿತಬೈಲ್, ತುಂಗಪ್ಪ ಬಂಗೇರ , ಸಂಜೀವ ಪೂಜಾರಿ ಬಿರ್ವ, ಬಂಟ್ವಾಳ್ ಟೌನ್ ಪೊಲೀಸ್ ಸರ್ಕಲ್ ಇನ್ಸ್‌ ಪೆಕ್ಟರ್ ಅನಂತ ಪದ್ಮನಾಭ, ಅಶ್ವಿನಿ ಕುಮಾರ್ ರೈ , ಪುಂಜಾಲಕಟ್ಟೆ ಎಸ್.ಐ ರಾಜೇಶ್ , ಹನೀಫ್ ಹಾಜಿ, ರಶೀದ್ ವಿಟ್ಲ, ಶಾಹುಲ್ ಹಮೀದ್, ಅಬ್ಬಸಾಲಿ, ಎಂ ಹೆಚ್ ಇಕ್ಬಾಲ್‌, ಅಬೂಬಕ್ಕರ್ ಪುತ್ತು, ರಜಾಕ್ ಕುಕ್ಕಾಜೆ, ಆರೀಫ್ ಪಡುಬಿದಿರೆ, ಆಶಿಕ್ ಕುಕ್ಕಾಜೆ ಯು ಕೆ ಮಹಮ್ಮದ್ ಹನೀಫ್ ಉಜಿರೆ, ಸುಜಹಾ ಮಹಮ್ಮದ್ , ಜುಬೈರ್, ಇಕ್ಬಾಲ್ ಪವರ್, ರಹೀಮ್ ಮಲ್ಲೂರು, ಮೋನಿಸ್ ಅಲಿ ಬಂಟ್ವಾಳ್, ಪುನೀತ್‌ ಕುಮಾರ್‌, ಕಿಶೋರ್‌ ಶೆಟ್ಟಿ, ಹನೀಫ್‌ ಪುಂಜಾಲಕಟ್ಟೆ, ವಿಶ್ವನಾಥ್ ಶೆಟ್ಟಿ , ನಿಸಾರ್ ಕುದ್ರಡ್ಕ, ವಚನ್ ಶೆಟ್ಟಿ , ಅಬ್ದುಲ್ ರಹಿಮಾನ್ ಬಸ್ತಿಕೋಡಿ, ಡಾ.ಮುಸ್ತಫಾ ಬಸ್ತಿಕೋಡಿ ಮೊಹಮ್ಮದ್, ಅಫ್ಸಾಲಿ ಬಸ್ತಿಕೋಡಿ, ಹಸೈನಾರ್ ಬಸ್ತಿಕೊಡಿ, ಯು. ಕೆ ಶುಕೂರು ಉಜಿರೆ, ಹುಸೈನ್‌ ಬಿ.ಸಿ ರೋಡ್‌, ಮಹಮ್ಮದ್ ಸಾಗರ್ ಎಗ್, ರಜಾಕ್ ಸಾಗರ್ ಡ್ರೆಸ್, ಡಿ.ಕೆ ಇಬ್ರಾಹಿಂ, ಅಬೂಬಕ್ಜರ್ ಬೆದ್ರೋಡಿ ಕಾಂಪ್ಲೆಕ್ಸ್, ಕಾರ್ತಿಕ್, ಮುಸ್ತಾಫ ವಗ್ಗ, ಅನ್ವರ್ ಹುಸೈನ್, ಪ್ರಕಾಶ್ ಆಳ್ವ , ರಮೇಶ್ ಶೆಟ್ಟಿ ಬಜೆ, ಚಂದ್ರ ಶೇಖರ್ ಶೆಟ್ಟಿ ಸಹನಾ , ನವೀನ್ ಶೆಟ್ಟಿ ಅಜ್ಜಿಬೆಟ್ಟು, ಉದಯ ಕುಮಾರ್ ಕುಂಡೋಳಿ, ರಿಚರ್ಡ್ ಡಿ ಸೋಜ, ಮಂಜುನಾಥ್ ಬಾಳಿಗ, ಶ್ರೀಶ ಐ ತಾಳ್ , ಕಿಶೋರ್ ಕುಮಾರ್ ನಾರಾಯಣ ಪೆರ್ನೆ, ಇಬ್ರಾಹಿಂ ಉಮೈ ಸೇರಿಂದತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ಎ.ಸಿ ರೂಂ ವ್ಯವಸ್ಥೆಯ ಜೊತೆಗೆ ವಿಶೇಷ ಖಾದ್ಯಗಳಾದ ಅರೇಬಿಯನ್‌ ಮಂದಿ, ರೋಸ್ಟೆಡ್‌ ಚಿಕನ್, ಪಿಜ್ಜಾ, ಬರ್ಗರ್‌, ಫ್ರೈಡ್‌ ಚಿಕನ್‌, ಇಂಡಿಯನ್‌, ಚೈನೀಸ್‌, ಅರೇಬಿಯನ್‌ ಅಫ್ಘನ್‌ ಸೀ ಫುಡ್‌, ಹಾಗೂ ಆಲಿಯಾ ಐಸ್‌, ಕ್ರೀಂ ಮತ್ತು ಜ್ಯೂಸ್‌ ಲಭ್ಯವಿದೆ.

Leave a Reply

Your email address will not be published. Required fields are marked *