ಸಕಲೇಶಪುರ: ಪೋಷಕರ ನಿರ್ಲಕ್ಷ್ಯಕ್ಕೆ 6 ವರ್ಷದ ಮಗು ಸಾವನ್ನಪ್ಪಿದ ಘಟನೆ ಹಾಲೆಬೇಲೂರು ಗ್ರಾಮದಲ್ಲಿ ಡಿ.31ರಂದು ನಡೆದಿದೆ.
ತಿಲಕ್ ಮತ್ತು ವಂದಿತಾ ದಂಪತಿಯ ಪುತ್ರ ಮೌರ್ಯ(6) ಮೃತಪಟ್ಟ ಕಂದಮ್ಮ.
ಬುಧವಾರ ಮಧ್ಯಾಹ್ನ ಸುಮಾರು 12:30ರ ವೇಳೆಗೆ ಮಗು ತನ್ನ ಮನೆಯ ಮುಂಭಾಗದ ಕಾಫಿ ತೋಟದ ಬಳಿ ಆಟವಾಡುತ್ತಿದ್ದ ವೇಳೆ, ಅಲ್ಲೇ ಸಮೀಪದಲ್ಲೇ ಇದ್ದ ನೀರಿನ ತೊಟ್ಟಿಗೆ ಬಿದ್ದು ಕೊನೆಯುಸಿರೆಳೆದಿದೆ.





