Breaking
22 Jun 2026, Mon

ಮನೆಯ ಮಹಡಿಯಿಂದ ಬಿದ್ದು ಯುವಕ ಸಾವು

ಪುಂಜಾಲಕಟ್ಟೆ: ಮನೆಯ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಡಿ.30 ರಂದು ಬಂಟ್ವಾಳ ಮೂಡನಡುಗೋಡು ತಾಲೂಕು ಗ್ರಾಮದ ನಡುದಂಡ ಎಂಬಲ್ಲಿ ನಡೆದಿದೆ.

ಚಂದ್ರ ಪೂಜಾರಿ ಅವರ ಪುತ್ರ ಪ್ರವೀಣ (26) ಮೃತಪಟ್ಟ ದುರ್ದೈವಿ.

ಸಹೋದರ ಪ್ರಸಾದ್ ಹಾಗೂ ತಮ್ಮ ಪ್ರವೀಣ ಪ್ರತಿರಾತ್ರಿ ಊಟದ ಬಳಿಕ ಮನೆಯ ಮಹಡಿಯ ಮೇಲೆ ಹೋಗಿ ಮಾತುಕತೆ ನಡೆಸಿ ಬರುತ್ತಿದ್ದರು.

ಡಿ. 30 ರಂದು ಎಂದಿನಂತೆ ರಾತ್ರಿಯೂ 9 ಗಂಟೆ ಸುಮಾರಿಗೆ ಮಹಡಿ ಮೇಲೆ ಹೋಗಿದ್ದರು. ಮರಳಿ ಬರುವಾಗ ಪ್ರಸಾದ್ ಮೊದಲು ಕೆಳಗೆ ಬಂದಿದ್ದರು. ಈ ವೇಳೆ ಪ್ರವೀಣ್ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.
ಪ್ರಸಾದ್ ಮನೆಯೊಳಗೆ ಬಂದ ಕೆಲವೇ ಕ್ಷಣಗಳಲ್ಲಿ ಮೇಲಿನಿಂದ ಏನೋ ಬಿದ್ದಂತೆ ಜೋರಾದ ಶಬ್ದ ಕೇಳಿಬಂದಿದೆ. ಕೂಡಲೇ ಪ್ರಸಾದ್, ಅವರ ತಾಯಿ ಹಾಗೂ ತಂಗಿ ಮನೆಯ ಹೊರಗೆ ಹೋಗಿ ನೋಡಿದಾಗ ಪ್ರವೀಣ್ ಮಹಡಿಯಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *