Breaking
10 Aug 2026, Mon

ಅಸಹಾಯಕರಿಗೆ ಆಸರೆ ಯೋಜನೆ: ಸಜೀಪ ಮೂಡ ದಿ. ನೀಲಪ್ಪ ಮೂಲ್ಯರ ಪತ್ನಿ ಸುಮನರಿಗೆ ನೂತನ ಗೃಹ ಹಸ್ತಾಂತರ

ಬಂಟ್ವಾಳ: ಸುಭಾಷ್ ಯುವಕ ಮಂಡಲ ಹಾಗೂ ಶಾರದಾ ಪೂಜಾ ಸಮಿತಿ ಊರದಾನಿಗಳ ನೆರವಿನೊಂದಿಗೆ ಅಸಹಾಯಕರಿಗೆ ಆಸರೆ ಯೋಜನೆ ಅಂಗವಾಗಿ ಸಜೀಪ ಮೂಡ ಗ್ರಾಮದ ಕೊಳಕೆ ಕಡು ಬಡತನದ ದಿ. ನೀಲಪ್ಪ ಮೂಲ್ಯರ ಪತ್ನಿ ಸುಮನ ಅವರಿಗೆ ಉದ್ಯಮಿ ರೊನಾಲ್ಡ್ ಮಾರ್ಟಿಷ ಅವರು ಸಜೀಪ ದಸರಾ ಶತಮಾನೋತ್ಸವ ಸಮಿತಿಯ ಅಂಗವಾಗಿ ನೂತನ ಗೃಹ ನಿರ್ಮಾಣ ಮಾಡಿ ಮನೆಯ ಕೀಲಿ ಕೈ ಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಶತಮಾನೋತ್ಸವ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ಪಂಚಾಯತ್ ಸದಸ್ಯರಾದ ಹಮೀದ್ ಸಿದ್ದಿಕ್, ಯೋಗೀಶ ಬೆಳ್ಚಡ, ಯುವಕ ಮಂಡಲ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ, ಪೂಜಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ವಿಷ್ಣುಮೂರ್ತಿಮಯ್ಯ, ಗಂಗಾಧರ ಕೊಲ್ಯ, ಭೋಜ ಬೆಲ್ಚಡ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *