Breaking
19 Sep 2026, Sat

ರಸ್ತೆ ಗುಂಡಿ  ತಪ್ಪಿಸಲು ಹೋಗಿ ಚರಂಡಿಗೆ ಪಲ್ಟಿಯಾದ  ರಿಕ್ಷಾ

ಸುಳ್ಯ : ರಸ್ತೆ ಮಧ್ಯೆಯಿದ್ದ ಗುಂಡಿಯನ್ನು ತಪ್ಪಿಸಲು ಹೋಗಿ ಆಟೋ ರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಮಗುಚಿ ಬಿದ್ದ ಘಟನೆ ಗಾಂಧಿನಗರದಿಂದ ಆಲೆಟ್ಟಿಯತ್ತ ಸಾಗುವ ರಸ್ತೆಯ ಗುರುಂಪು ಎಂಬಲ್ಲಿ ಡಿ.27ರಂದು ನಡೆದಿದೆ.

ರಿಕ್ಷಾ ಚಾಲಕ ಆನಂದ ಅವರು ನಾಗಪಟ್ಟಣ ಕಡೆಗೆ ಸಂಚರಿಸುತ್ತಿದ್ದ ವೇಳೆ ರಸ್ತೆ ಮಧ್ಯೆ ಇರುವ ಗುಂಡಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಮಹಿಳೆ ಹಾಗೂ ರಿಕ್ಷಾ ಚಾಲಕ ಆನಂದ ಅವರಿಗೆ  ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ.

Leave a Reply

Your email address will not be published. Required fields are marked *