Breaking
19 Sep 2026, Sat

ಅಲೆತ್ತೂರು ಯುವ ಬಳಗ ಬಿಸಿ ರೋಡ್ ಇದರ 18ನೇ ವಾರ್ಷಿಕೋತ್ಸವದ ಅಂಗವಾಗಿ ಅಲೆತ್ತೂರು ಹಬ್ಬ ಕಾರ್ಯಕ್ರಮ

ಬಂಟ್ವಾಳ: ಅಲೆತ್ತೂರು ಯುವ ಬಳಗ ಬಿಸಿ ರೋಡ್ ಇದರ 18ನೇ ವಾರ್ಷಿಕೋತ್ಸವದ ಅಂಗವಾಗಿ ಅಲೆತ್ತೂರು ಹಬ್ಬ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ವೈಭವ, ಯಕ್ಷಗಾನ ಬಯಲಾಟ ಮುರಾಸುರ ವಧೆ, ಯಕ್ಷಕದಂಬ ಯಕ್ಷಗಾನ ಕಲಾಸಂಘ ಆಲೆತ್ತೂರು ಬಿಸಿ ರೋಡ್ ಇವರಿಂದ ಯಕ್ಷಗಾನ ಬಯಲಾಟ, ರಂಗ ಕಲಾವಿದರು ಅಲೆತ್ತೂರು ಅಭಿನಯಿಸಿದ ತುಳು ಸಾಮಾಜಿಕ ನಾಟಕ ನಮ್ಮನೇ ಇಲ್ಲ್ ಪ್ರದರ್ಶನಗೊಂಡಿತು.

ಗೌರವಾಧ್ಯಕ್ಷ ನರಸಿಂಹಮಯ್ಯ ಸ್ವಾಗತಿಸಿದರು. ರಾಘವೇಂದ್ರ ಉಪಾಧ್ಯಾಯ ನಿರೂಪಿಸಿದರು.

Leave a Reply

Your email address will not be published. Required fields are marked *