Breaking
22 Mar 2026, Sun

ಸಜೀಪದ ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಮೂಲಮಂತ್ರ ಲಕ್ಷ ಜಪಯಜ್ಞ ದೂರ್ವ ಹೋಮ

ಬಂಟ್ವಾಳ: ಸಜೀಪ ಮೂಡದ ಅನ್ನಪಾಡಿ ಶ್ರೀ ಕ್ಷೇತ್ರದ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನೀಲೇಶ್ವರ.ಕೆ ಉಚ್ಚಿಲ ತಾಯಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಬಾಲ ಗಣಪತಿ ಮೂಲಮಂತ್ರ ಲಕ್ಷ ಜಪ ಯಜ್ಞ ದೂರ್ವಹೋಮ ನಡೆಯಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಸಾಮೂಹಿಕ ಜಪ ಯಜ್ಞ ಸಂಕಲ್ಪ ನೆರವೇರಿಸಿದರು. ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳ್ಳಿಪಾಡಿ.ಡಾ ಕೆ ಪ್ರಭಾಕರ ಭಟ್. ದೀಪ ಬೆಳಗಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಪಾಯಜ್ಞ ಸಮಿತಿ ಕಾರ್ಯಾಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ, ನಗ್ರೀ ಗುತ್ತು ವಿವೇಕಶೆಟ್ಟಿ, ಎಂ ಮಹಾಬಲ ಕೊಟ್ಟಾರಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಕಂಬಳಿ, ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರಿ ತಾಯ, ನಂದಾವರ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಪ್ರಭಾಕರ್ ಶೆಟ್ಟಿ, ಸದೀಪ ಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ವಿಶ್ವನಾಥ ಬೆಲ್ಚಡ, ಮನೋಜ್ ಪೂಜಾರಿ ಅನ್ನಪಾಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಆಳ್ವ, ಕೆ ಸಂಜೀವ ಪೂಜಾರಿ, ಚೆನ್ನಯ್ಯ ಸಾಲಿಯಾನ್, ವಿಕ್ರಮ ಬಂಗೇರ, ಭುವನೇಶ ನರಿಕೊಂಬು, ದೈವಗಳ ಗಡಿಪ್ರದಾನರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆ ಗುತ್ತು ಸರ್ವರನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *