Breaking
22 Mar 2026, Sun

ಕ್ರೀಡೆಯು ಸಮಾಜಮುಖಿ ಕೆಲಸಗಳಿಗೆ ಇನ್ನಷ್ಟು ಪ್ರೇರಣೆಯಾಗಲಿ: ಸಂತೋಷ್ ನೆತ್ತರಕೆರೆ

ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ಬೊಳ್ಳಾರಿ ಇದರ ಅಶ್ರಯದಲ್ಲಿ ಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ -3 ಕ್ರಿಕೆಟ್ ಪಂದ್ಯಾಟವನ್ನು ಡಿ. 28 ರಂದು ನಡೆಯಿತು.

ಈ ಪಂದ್ಯಾಟವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ರಾಷ್ಟ್ರೀಯ ಚಿಂತನೆಯೊಂದಿಗೆ ಸಂಘಟನೆಯ ಮೂಲಕ ಸಮಾಜಮುಖಿ ಸೇವೆಯನ್ನು ಮಾಡುತ್ತಿರುವ ಆಶೀರ್ವಾದ ಸೇವಾ ಸಂಘ ನಿರಂತರ 38 ವರುಷಗಳಿಂದ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ, ಇದೀಗ ಕ್ರಿಕೆಟ್ ಮೂಲಕ ಸಂಘಟನೆಯು ಇನ್ನಷ್ಟು ಗಟ್ಟಿಯಾಗಿ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿ, ಕ್ರೀಡೆಯು ಇವರ ಸಮಾಜಮುಖಿ ಕೆಲಸಗಳಿಗೆ ಇನ್ನಷ್ಟು ಪ್ರೇರಣೆಯಾಗಲಿ ಎಂದು ಪತ್ರಕರ್ತ ಸಂತೋಷ್ ನೆತ್ತರಕೆರೆ ಹೇಳಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತಾ ಪಂ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಶ್ರೀ ಶಾರದಾ ಪೂಜಾ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಘವ ಬಂಗೇರ ಪೆರ್ಲಬೈಲು, ಸಾಮಾಜಿಕ ಕಾರ್ಯಕರ್ತ ಜಗದೀಶ ಪೂಜಾರಿ ಕುಮ್ಡೇಲ್, ಪ್ರಮುಖರಾದ ದಿವಾಕರ ಪೆರ್ಲಬೈಲು, ನಾರಾಯಣ್ ಕಿರೋಡಿಯನ್, ಸುಧಾಕರ ಕೊಟ್ಟಿಂಜ, ಗೋಪಾಲ್ ಬೊಳ್ಳಾರಿ, ಪ್ರದೀಪ್ ಕುಮಾರ್ ಮೂದಲ್ಮೆ, ಅಶೋಕ್ ಕೊಂಡಣ, ಪ್ರಿಯಾ ಸತೀಶ್, ಜಾಲಜಾಕ್ಷಿ ಕೋಟ್ಯಾನ್, ದೀಪಕ್ ಬೊಳ್ಳಾರಿ, ದಯಾನಂದ ಬೊಳ್ಳಾರಿ, ಭವಾನಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಸಂದೀಪ್ ಕುಲಾಲ್ ವಂದಿಸಿ, ಸುಶಾನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿನೋದ್ ಬೊಳ್ಳಾರಿ ಸಹಕರಿಸಿದರು.

Leave a Reply

Your email address will not be published. Required fields are marked *