Breaking
22 Mar 2026, Sun

ರೈಲು ಹಳಿಯ ಮೂಲಕ ಅಡ್ಡದಾಟುವ ವೇಳೆ ರೈಲು ಬಡಿದು ವ್ಯಕ್ತಿ ಸಾವು

ಕಾಸರಗೋಡು: ರೈಲ್ವೇ ಹಳಿಯ ಮೂಲಕ ಅಡ್ಡದಾಟುವ ವೇಳೆ ರೈಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಸರಗೋಡುವಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಕೊಡಗು ನಿವಾಸಿ ರಾಜೇಶ್ (35) ಎಂದು ಗುರುತಿಸಲಾಗಿದೆ.

ರೈಲಿನಿಂದ ಇಳಿದ ಬಳಿಕ ಹಳಿಯ ಮೂಲಕ ಅಡ್ಡದಾಟಿ ಫ್ಲಾಟ್‌ಫಾರ್ಮ್ ಹತ್ತಲು ಯತ್ನಿಸುತ್ತಿದ್ದ ವೇಳೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಅಫಘಾತದಲ್ಲಿ ವ್ಯಕ್ತಿಯ ತಲೆ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು ಅಂಗಿಯ ಜೇಬಿನಿಂದ ದೊರೆತ ಆಧಾರ್ ಕಾರ್ಡ್ ನ ಆಧಾರದ ಮೇಲೆ ಮೃತ ವ್ಯಕ್ತಿಯನ್ನು ಗುರುತಿಸಲಾಗಿದೆ.

Leave a Reply

Your email address will not be published. Required fields are marked *