ಉಡುಪಿ: ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯುತಿದ್ದ ನೇಮೋತ್ಸವದ ವೇಳೆ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಮೂವರು ಮಹಿಳೆಯರು ಕಳವು ಮಾಡಿ ಪರಾರಿಯಾದ ಘಟನೆ ಡಿ. 24 ರಂದು ನಡೆದಿದೆ.

ಹೆಜಮಾಡಿ ನಿವಾಸಿಯಾದ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳವುಗೈದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಇದೀಗ ಮಹಿಳೆಯರ ಪತ್ತೆಗೆ ಮುಂದಾಗಿದ್ದಾರೆ.





