Breaking
19 Sep 2026, Sat

ಮಹಿಳೆಯ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಚಿನ್ನದ ಸರ ಕಸಿದು ಪರಾರಿಯಾದ ಕಳ್ಳ

ಮಂಗಳೂರು : ಮಹಿಳೆಯ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಚಿನ್ನದ ಸರ ಕಸಿದು ಕಳ್ಳನೊಬ್ಬ ಪರಾರಿಯಾದ ಘಟನೆ ಮಂಗಳೂರಿನ ಕೊಂಚಾಡಿ ಕೊಪ್ಪಲಕಾಡಿನಲ್ಲಿ ಡಿ.25 ರಂದು ನಡೆದಿದೆ.

ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಚಿನ್ನದ ಸರ ಕಸಿದು ಕಳ್ಳನೊಬ್ಬ ಪರಾರಿಯಾಗಿದ್ದು, ಸ್ವಲ್ಪ ದೂರ ಹೋದ ಬಳಿಕ ತನ್ನ ಬಟ್ಟೆ ಬದಲಾವಣೆ ಮಾಡಿ, ಕಣ್ಮರೆಯಾಗಿದ್ದಾನೆ.

ಕಳ್ಳತನದ ದೃಶ್ಯಗಳು ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *