ಮಹಾರಾಷ್ಟ್ರ: ರಾಜ್ಯ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೆತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಹಾಲಿ ಶಾಸಕ ಪ್ರಶಾಂತ್ ಠಾಕೂರ್ ರವರ ಪರವಾಗಿ ಮಹಾರಾಷ್ಟ್ರ ಬಿಜೆಪಿ ನಾಯಕರಾದ ಸಂತೋಷ ಜಿ ಶೆಟ್ಟಿ ದಳಂದಿಲ, ಸಜಿಪ ಬಂಟ್ವಾಳ ಇವರ ಮಾರ್ಗದರ್ಶನದಲ್ಲಿ ರಾಯ್ ಘಡ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಲಕ್ಶ್ಮೀಶ (ಸುಜೀತ್ ) ಪೂಜಾರಿ ನೇತೃತ್ವದಲ್ಲಿ ಪನ್ವೆಲ್ ಪೇಟೆಯಲ್ಲಿ ಮನೆ ಸಂಪರ್ಕ ಮಾಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯದರ್ಶಿ ಪ್ರಭಾಕರ ಪ್ರಭು, ಕರ್ಪೆ ಶಕ್ತಿ ಕೇಂದ್ರ ಪ್ರಮುಕ್ ತೇಜಸ್ ಪೂಜಾರಿ, ಪ್ರಮುಖರಾದ ನವೀನ ಪೂಜಾರಿ ಕರ್ಪೆ, ಸದಾನಂದ ಪೂಜಾರಿ ಕರ್ಪೆ, ತೇಜಸ್ವಿನಿ ಲಕ್ಶ್ಮೀಶ ಪೂಜಾರಿ ಪನಿವೆಲ್, ಅಡ್ವಾಕೇಟ್ ಸವೀನಾ ಬಂಗೇರ ಪನಿವೆಲ್, ಶಿವದಾಸನ್ ಪನಿವೆಲ್,ಸರಸ್ವತಿ ಪನಿವೆಲ್,ಶಮತ್ತಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು