Breaking
26 Sep 2026, Sat

ಅಕ್ರಮ ಎಂಡಿಎಂಎ ಸಾಗಾಟ : ಆರೋಪಿಯ ಬಂಧನ

ಮೂಡಬಿದಿರೆ: ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ರೌಡಿ ಶೀಟರ್ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ಡಿ.16 ರಂದು ಕೊಡಂಗಲ್ಲು ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಕಲ್ಲಡ್ಕ ನಿವಾಸಿ ತೌಸೀಫ್ ಎಂದು ಗುರುತಿಸಲಾಗಿದೆ.

ಮೂಡಬಿದಿರೆ ತಾಲೂಕಿನ ಶಿರ್ತಾಡಿಯಿಂದ ಕೊಡಂಗಲ್ಲು – ಮಹಾವೀರ ಕಾಲೇಜು ಮಾರ್ಗವಾಗಿ ಮಂಗಳೂರಿಗೆ ಎಂಡಿಎಂಎ ಸಹಿತ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರಿಗೆ ಮಾಹಿತಿ ದೊರೆತ ಹಿನ್ನಲೆ ಅವರು ಆತನ ಕಾರು ನಿಲ್ಲಿಸಿ ಬಂಧಿಸಲು ಹೋಗಿದ್ದ ಸಂದರ್ಭ ಆರೋಪಿಯು ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಸರಕಾರಿ ವಾಹನದಲ್ಲಿ ಬೆನ್ನು ಹತ್ತಿ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ತಡೆದು ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 5 ಪ್ರಕರಣಗಳು ದಾಖಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಯಿಂದ ಪೊಲೀಸರು ಸುಮಾರು 50ಸಾವಿರ ರೂ. ಮೌಲ್ಯದ 10.800 ಗ್ರಾಂ ತೂಕದ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಸುಮಾರು 3ಲಕ್ಷ‌ ರೂ.‌ಮೌಲ್ಯದ ಕಾರು ಹಾಗೂ ಕಾರಿನಲ್ಲಿದ್ದ ತಲವಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *