Breaking
26 Sep 2026, Sat

ಅಡಿಕೆ–ಕಾಳುಮೆಣಸು ವಿಪರೀತ ನಾಶ: ವಿಮಾ ತಾರತಮ್ಯ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ನಡೆಸುವಂತೆ ತೀರ್ಮಾನ

ಪ್ರಾಕೃತಿಕ ವಿಕೋಪ ಹಾಗೂ ವಿವಿಧ ರೀತಿಯ ರೋಗ ಬಾಧೆಗಳಿಂದ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳು ವಿಪರೀತ ನಾಶವಾಗಿದ್ದು ರೈತರು ಕಂಗೆಟ್ಟಿರುವ ಬಗ್ಗೆ ಡಿ. 12 ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು.

ಈ ಸಭೆಯಲ್ಲಿ ಎಲ್ಲಾ ಸಹಕಾರಿ ಸಂಘಗಳೂ ಕೂಡ ಕಾನೂನು ಹೋರಾಟ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.

ಈ ವರ್ಷ ರೈತರು ಹವಾಮಾನ ಆಧಾರಿತ ಫಸಲು ಬೆಲೆ ವಿಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀರಿಕ್ಷಿಸುತ್ತಿದ್ದರೂ, ಈ ವರ್ಷ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ವಿಮೆ ಮೊತ್ತ ರೈತರ ಖಾತೆಗೆ ಜಮಾಗೊಂಡಿದೆ. ನಮ್ಮ ಸಂಘ ವ್ಯಾಪ್ತಿಯ ಉರುವಾಲು ಗ್ರಾಮದ ರೈತರ ಖಾತೆಗೆ ಇನ್ನೂ ಕೂಡ ವಿಮೆ ಹಣ ಜಮಾ ಆಗದೆ ರೈತರು ಸಂಕಷ್ಟದಲ್ಲಿದ್ದಾರೆ. ಇದಲ್ಲದೆ ನಮ್ಮ ಸಂಘದ ವ್ಯಾಪ್ತಿಯ ಕರಾಯ, ಹಾಗೂ ತಣ್ಣೀರುಪಂತ ಗ್ರಾಮದ ರೈತರಿಗೆ ಈ ವರ್ಷ ಕಳೆದ ವರ್ಷಗಳಿಗಿಂತಲೂ ತುಂಬಾ ಕಡಿಮೆ ಮೊತ್ತ ರೈತರಿಗೆ ಜಮೆಯಾಗಿದೆ. ಈ ತಾರತಮ್ಯ ನೀತಿಯಿಂದ ಬಯಲು ಸೀಮೆಯ ರೈತರಂತೆ ನಮ್ಮ ಜಿಲ್ಲೆಯ ರೈತರು ತುಂಬಾ ಶೋಚನಿಯ ಪರಿಸ್ಥಿತಿ ಜೀವನ ನಡೆಸುವಂತಾಗಿದೆ.

ಈ ಬಗ್ಗೆ ಸರ್ಕಾರ ಎಚ್ಚೆತ್ತುಗೊಂಡು ಸಮಸ್ಯೆ ಪರಿಹರಿಸದಿದ್ದಲ್ಲಿ ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆಂದು ತಣ್ಣೀರುಪಂತ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಾನಂದ ಕಲ್ಲಾಪು ತಿಳಿಸಿದ್ದಾರೆ.

Leave a Reply

Your email address will not be published. Required fields are marked *