ಮಂಗಳೂರು: ಕುಡುಬಿ ಸಮಾಜ ಸೇವಾ ಸಂಘ (ರಿ )ಕೊಂಪದವು ಇದರ ನೇತೃತ್ವದಲ್ಲಿ ನಡೆದ “ಹಕ್ಕೋತ್ತಾಯ ಜಾಥಾ ” ದ ಅವಲೋಕನ ಸಭೆಯು ಮಿಜಾರು ಅಣ್ಣಪ್ಪ ಸಭಾಭವನದಲ್ಲಿ ಇಂದು ಬೆಳಿಗ್ಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಕೊಂಪದವು ವಹಿಸಿದ್ದು, ಕಾರ್ಯದರ್ಶಿ ಶ ಶೇಖರ ಗೌಡ, ಉಪಾಧ್ಯಕ್ಷರಾದ ಕೊರ್ಗ್ಯ ಗೌಡ, ಸಂಘಟನಾ ಕಾರ್ಯದರ್ಶಿಗಳಾದ ಸುಂದರ ಗೌಡ ಕಡಂದಲೆ, ಕೂಡುಕಟ್ಟುಗಳ ಗುರಿಕಾರರು, ಸಂಘದ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ನಡೆದ ಹಕ್ಕೋತ್ತಾಯ ಜಾಥಾದಲ್ಲಿ ಕುಡುಬಿ ಸಮಾಜದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಸಮಾಜದ ಒಗ್ಗಟ್ಟನ್ನು ಯಾರೂ ಕೂಡ ಒಡೆಯಬಾರದೆಂಬ ಅಭಿಪ್ರಾಯ ವ್ಯಕ್ತವಾಯಿತು. ಮಾನ್ಯ ಶಾಸಕರುಗಳು ಮತ್ತು ಲೋಕಸಭಾ ಸದಸ್ಯರು ಹಕ್ಕೊತ್ತಾಯ ಜಾಥಾವನ್ನು ನಡೆಸಿ ಯಶಸ್ವಿಯಾಗಿದ್ದನ್ನು ಪ್ರಶಂಸಿದ್ದಾರೆ, ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.