Breaking
24 Dec 2024, Tue

ಕುಡುಬಿ ಸಮಾಜ ಸೇವಾ ಸಂಘ (ರಿ )ಕೊಂಪದವು ಇದರ ಅವಲೋಕನ ಸಭೆ

ಮಂಗಳೂರು: ಕುಡುಬಿ ಸಮಾಜ ಸೇವಾ ಸಂಘ (ರಿ )ಕೊಂಪದವು ಇದರ ನೇತೃತ್ವದಲ್ಲಿ ನಡೆದ “ಹಕ್ಕೋತ್ತಾಯ ಜಾಥಾ ” ದ ಅವಲೋಕನ ಸಭೆಯು ದಿನಾಂಕ 10/11/2024 ರಂದು ಮಿಜಾರು ಅಣ್ಣಪ್ಪ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9 ರಿಂದ 11:30 ತನಕ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಕೊಂಪದವು, ಕಾರ್ಯದರ್ಶಿ ಶ್ರೀ ಶೇಖರ ಗೌಡ, ಉಪಾಧ್ಯಕ್ಷರಾದ ಶ್ರೀ ಕೊರ್ಗ್ಯ ಗೌಡ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸುಂದರ ಗೌಡ ಕಡಂದಲೆ, ಕೂಡುಕಟ್ಟುಗಳ‌ ಗುರಿಕಾರರು, ಸಂಘದ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕುಡುಬಿ ಸಮಾಜದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ‌ಪಾಲ್ಗೋಂಡ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಯಿತು. ನಮ್ಮ ಸಮಾಜದ ಒಗ್ಗಟ್ಟನ್ನು ಯಾರೂ‌‌ ಕೂಡ ಒಡೆಯಬಾರದೆಂದು‌ ಅಭಿಪ್ರಾಯ ವ್ಯಕ್ತವಾಯಿತು. ಮಾನ್ಯ‌ ಶಾಸಕರುಗಳು ಮತ್ತು ಲೋಕಸಭಾ ಸದಸ್ಯರು ಹಕ್ಕೋತ್ತಾಯ ಜಾಥಾವನ್ನು ನಡೆಸಿ ಯಶಸ್ವಿಯಾಗಿದ್ದನ್ನು ಪ್ರಶಂಸಿಸಿದರು. ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.

Leave a Reply

Your email address will not be published. Required fields are marked *