ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ವಿಟ್ಲ ತಾಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ದೇಗುಲ, ಶಿಕ್ಷಣ ಸಂಸ್ಥೆ ಹಾಗೂ ಫಲಾನುಭವಿಗಳಿಗೆ ಸಹಾಯಧನ, ಸವಲತ್ತುಗಳನ್ನು ನೀಡಲಾಗಿದೆ ಎಂದು ಯೋಜನೆಯ ವಿಟ್ಲ ಯೋಜನಾಧಿಕಾರಿ ರಮೇಶ್ ತಿಳಿಸಿದ್ದಾರೆ.
ವಿಟ್ಲ ಯೋಜನಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೇವಾ ಕಾರ್ಯಕ್ರಮಗಳ ವಿವರ ನೀಡಿದರು.ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಸಮುದಾಯ ಅಭಿವೃದ್ಧಿಯ ವಿಶೇಷ ಸೇವೆ ನಡೆದಿದೆ.
ಶಿಕ್ಷಣ ಸೇವೆಗೆ ಹೆಚ್ಚು ಒತ್ತು ನೀಡಿದ್ದು, ಯೋಜನೆಯ ಮೂಲಕ 29 ಜ್ಞಾನದೀಪ ಶಿಕ್ಷಕರನ್ನು ನೀಡಲಾಗಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 51 ಶಾಲೆಗಳಿಗೆ ಶಿಕ್ಷಕರನ್ನು ನೀಡಲಾಗಿದೆ. ಯೋಜನೆಯಿಂದ ಶೇ.80 ಅನುದಾನ ಶಾಲೆಗಳು ಪೀಠೋಪಕರಣಗಳಿಗೆ ನೀಡಲಾಗುತ್ತಿದ್ದು, ಈ ಪೈಕಿ 32 ಶಾಲೆಗಳಿಗೆ 13 ಲಕ್ಷದ 94 ಸಾವಿರ ರೂ.ಅನುದಾನದಲ್ಲಿ ಬೆಂಚು, ಡೆಸ್ಕ್ ಪೀಠೋಪಕರಣಗಳ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಇದಲ್ಲದೇ ಸುಜ್ಞಾನ ನಿಧಿ ಮೂಲಕ ವಿದ್ಯಾರ್ಥಿವೇತನ, ಜನಮಂಗಲ ಕಾರ್ಯಕ್ರಮ, ಕ್ರಿಟಿಕಲ್ ಇಲ್ ನೆಸ್ ಫಂಡ್, ವಾತ್ಸಲ್ಯ ಮನೆ ರಿಪೇರಿ, ಮಾಶಾಸನ ವಿತರಣೆಯಾಗಿದೆ. ಶೌರ್ಯ ವಿಪತ್ತು ಘಟಕಗಳ ಮೂಲಕ ಹತ್ತಾರು ಶ್ರಮದಾನ ಕಾರ್ಯ ನಡೆದಿದೆ ಎಂದು ಸೇವಾ ಕಾರ್ಯಗಳ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೇಪು ವಲಯ ಮೇಲ್ವಿಚಾರಕ ಜಗದೀಶ್, ಶೌರ್ಯ ವಿಪತ್ತು ತಂಡದ ಚಿನ್ನಾ ಉಪಸ್ಥಿತರಿದ್ದರು.