ಬೆಳ್ತಂಗಡಿ : ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಅಶೋಕ್ ಪಿ.ಎಲ್ ರವರಿಗೆ ಶಾಸಕ ಹರೀಶ್ ಪೂಂಜ ಅವರು ಶಾಸಕರ ನಿವಾಸದಲ್ಲಿ ಗೌರವಾರ್ಪಣೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಕಡಮ್ಮಾಜೆ, ತಾಲೂಕು ಬಿ ಎಂ ಎಸ್ ಅಧ್ಯಕ್ಷರು, ವಕೀಲರಾದ ಉದಯ ಕುಮಾರ್ ಬಿ. ಕೆ, ಬಂದಾರು ಪಂಚಾಯತ್ ಸದಸ್ಯರಾದ ಚೇತನ್ ಪಾಲ್ತಿಮಾರ್, ವಿಮಲ ತಾರಿದಡಿ, ಶಿವಣ್ಣ ಗೌಡ ಹೇವ, ಶಿವಪ್ರಸಾದ್ ಗೌಡ ಸುದೆಪ್ಪಿಲ, ಪ್ರಮುಖರಾದ ಅಶೋಕ ಮೊಗ್ರ, ಕುಶಾಲಪ್ಪ ಗೌಡ, ಗೋಪಾಲ ಗೌಡ, ರಾಜೇಶ್, ಶಿವಪ್ಪ ಗೌಡ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.

ಅಶೋಕ್ ಪಿ. ಲ್ ಪರಿಚಯ
ದಿ. ಲಕ್ಷ್ಮಣ ಗೌಡ ಮತ್ತು ಕುಸುಮ ದಂಪತಿಯ ಪುತ್ರನಾದ ಅಶೋಕ್ ಪಿ ಲ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ, ಕ್ರೀಡಾಕೂಟದಲ್ಲೂ ಮಿಂಚಿದ್ದರು. ಬಳಿಕ 2003 ರಲ್ಲಿ ಭಾರತ ದೇಶದ ರಕ್ಷಣಾ ವಿಭಾಗದ ಏರ್ಫೋರ್ಸ್ ಗೆ ಆಯ್ಕೆಯಾದರು.

2004ರಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ತರಬೇತಿ ಪಡೆದು ಲಡಾಕ್, ಜಮ್ಮು ಕಾಶ್ಮೀರ, ಶಿಲ್ಲೊಂಗ್, ಮೇಘಾಲಯ, ಅಸ್ಸಾಂ, ಪಠಾನ್ ಕೋಟ್, ಕೂಪೂರ, ಬಟಾಮುಲ್ಲಾ, ರಾಂಚಿ ಹೀಗೆ ಹಲವಾರು ದೇಶದ ಭಯಾನಕ ಗಡಿ ಪ್ರದೇಶಗಳಲ್ಲಿ, ಮೈ ಕೊರೆಯುವ 25 ಡಿಗ್ರಿ ತಾಪಮಾನದಲ್ಲೂ ಸೇವೆ ಸಲ್ಲಿಸಿದ್ದಾರೆ.
22 ವರ್ಷ ಸೈನ್ಯದಲ್ಲಿದ್ದು ನವೆಂಬರ್ 31 ರಂದು ಸೇವೆಯಿಂದ ನಿವೃತ್ತಿಗೊಂಡು ಡಿ 04 ರಂದು ಹುಟ್ಟೂರಿಗೆ ಮರಳಿದ್ದಾರೆ.




