Breaking
23 Mar 2026, Mon

ಜಂಫ್‌ರೊಪ್ ಸ್ಪರ್ಧೆ: ಭವಿಷ್ ಹಲಾಯಿ ರಾಜ್ಯಮಟ್ಟಕ್ಕೆ ಆಯ್ಕೆ

ಎಡಪದವು : ದ.ಕ. ಜಿಲ್ಲಾ ಮಟ್ಟ, ಪದವಿಪೂರ್ವ ಕಾಲೇಜು ವಿಭಾಗದ ಜಂಫ್‌ರೊಪ್ ಸ್ಪರ್ಧೆಯಲ್ಲಿ ಭವಿಷ್ ಹಲಾಯಿ ಪ್ರಥಮ ಶ್ರೇಣಿಯೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಪದವಿಪೂರ್ವ ಕಾಲೇಜು ವಾಮದಪದವು ಇಲ್ಲಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದು, ಕೊಯಿಲ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಜನಾರ್ಧನ ಅವರು ತರಬೇತಿ ನೀಡಿರುತ್ತಾರೆ.

ವಾಮದಪದವು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಧಾಕರ್ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ ಪ್ರೋತ್ಸಾಹ ನೀಡಿದ್ದಾರೆ.

ಇವರು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಅಶೋಕ್‌ ಸಾಲಿಯಾನ್‌ ಹಾಗೂ ತುಳಸಿ ದಂಪತಿಗಳ ಪುತ್ರ.

Leave a Reply

Your email address will not be published. Required fields are marked *