Breaking
23 Mar 2026, Mon

ಬಂಟ್ವಾಳ ಸಮೀಪ ದ್ವಿಚಕ್ರ ಮತ್ತು ತ್ರಿಚಕ್ರ ವಾಹನದ ಮೊಡಿಫೈಡ್ ಸಾಮಾಗ್ರಿಗಳ ಮಳಿಗೆ ಶುಭಾರಂಭ

ಬಂಟ್ವಾಳ: ಮಯ್ಯರಬೈಲ್ ಎಂಬಲ್ಲಿನ ದಿವ್ಯ ಕಾಂಪ್ಲೆಕ್ಸ್ ನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹದ ಮೊಡಿಫೈಡ್ ಸಾಮಾಗ್ರಿಗಳ PISTON Modified Accessories Bike – Two wheeler and Helmets ಮಳಿಗೆ ಡಿ.08ರಂದು ಶುಭಾರಂಭಗೊಂಡಿದೆ.

ವಿನೋದ್ ರಾಜ್ ಮಾಲಕತ್ವದ ಈ ನೂತನ ಮಳಿಗೆಯನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ದಿನೇಶ್ ಅಮ್ಟೂರು ಅವರು ಉದ್ಘಾಟಿಸಿ ಈ ಸಂಸ್ಥೆ ಉತ್ತರೊತ್ತರವಾಗಿ ಬೆಳಗಲಿ, ಗ್ರಾಹಕರಿಗೆ ಒಳ್ಳೆಯ ಸೇವೆ ಸಿಗಲಿ ಎಂದು ಶುಭ ಹಾರೈಸಿದರು.

ತ್ರಿ ಚಕ್ರ ಮಳಿಗೆಯನ್ನು ಮಾಲಕರ ಅಜ್ಜಿ ಕಮಲ ಅವರು ಉದ್ಘಾಟಸಿದರು.

ಗ್ಯಾರೇಜ್ ಮಾಲಿಕರ ಸಂಘದ ರಾಜ್ ಚಂಡ್ತಿಮಾರ್ ರವರು ಮಾತನಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆಯ ಜೊತೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯರಾದ ದಿನೇಶ್ ಭಂಡಾರಿ, ಪುರಸಭೆ ಸದಸ್ಯರಾದ ಹರಿಪ್ರಸಾದ್ ಮಯ್ಯರಬೈಲು, ಸಾಮಾಜಿಕ ಕಾರ್ಯಕರ್ತರ ವಸಂತ್ ಭಂಡಾರಿ, ಜಿಲ್ಲಾ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಉಮೇಶ್‌ ಕುಲಾಲ್‌ ಗುರುವಾಯನಕೆರೆ , ಕಟ್ಟಡ ಮಾಲಕರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ವಿನಯ್ ಯವರು ಸ್ವಾಗತಿಸಿ, ಸಂಸ್ಥೆಯ ಮಾಲಕ ವಿನೋದ್ ರಾಜ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *