Breaking
22 Mar 2026, Sun

ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೇಮಂತ್ ಡಿ. ಅವರಿಗೆ ಅಭಿನಂದನೆ

ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಡಿ. 12 ರಂದು ‘ಕೊಡುಗೈ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ‘ ನಡೆಯಿತು.

ಕ್ರಿಟಿಕಲ್ ಕೇರ್ ಯೂನಿಟ್‌ಗೆ ವಸ್ತು ರೂಪದಲ್ಲಿ ಕೊಡುಗೆ ನೀಡಿದ ದಾನಿಗಳನ್ನು ಪದ್ಮರಾಜ್ ಆರ್. ಪೂಜಾರಿ ಹಾಗೂ ಡಾ. ದುರ್ಗಾಪ್ರಸಾದ್ ಎಂ.ಆರ್. ರವರು ಗೌರವಿಸಿ ಅಭಿನಂದಿಸಿದರು.

ಹೇಮಂತ್ ಕುಮಾರ್ ಡಿ ಅವರಿಗೆ ಅನ್ವೇಷಣ ಸಾಂಸ್ಕೃತಿಕ ಅಕಾಡೆಮಿ (ರಿ.), ಬೆಂಗಳೂರು ಅವರು ನೀಡಿದ ಕಲಾರತ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವನ್ನು ಗಮನಿಸಿ, ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಪುಟ್ಟ ಕಲಾವಿದನಾಗಿ ಆಸ್ಪತ್ರೆಗೆ ಏನಾದರೂ ಕಲಾಕೃತಿ ಮಾಡಬೇಕು ಎಂಬುದು ದೊಡ್ಡ ಕನಸಾಗಿತ್ತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾ ಪ್ರಸಾದ್ ರವರ ಆರ್ ಸಿ ಹೆಚ್ಚ್ ಗಾರ್ಡನ್ ಮಾಡುವ ಯೋಚನೆ ಯೋಜನೆಯೂ ಆಗಿತ್ತು ಎಂದು ಹೇಮಂತ್ ಕುಮಾರ್ ಡಿ ಅವರು ಹೇಳಿದ್ದಾರೆ.

ಬಿಸಾಡುವ ವಸ್ತುಗಳನ್ನು ಬಳಸಿ ತಾಯಿ–ಮಗುವಿನ ಆಕೃತಿಯ ಕಲಾಕೃತಿಯನ್ನು ಅವರು ಸಿದ್ಧಪಡಿಸಿದ್ದು, ಅದನ್ನು ಪದ್ಮರಾಜ್ ಆರ್. ಪೂಜಾರಿ—ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷರ ದಿವ್ಯ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಿದರು.

ಪದ್ಮರಾಜ್ ಆರ್ ಪೂಜಾರಿ ಯವರು ಮತ್ತು ನೆರೆದ ಮಖ್ಯ ಗಣ್ಯರೆಲ್ಲಾ ಈ ಕಲಾಕೃತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *