Breaking
22 Mar 2026, Sun

ಮಂಗಳೂರು ಕಾರಾಗೃಹದಲ್ಲಿ ಖೈದಿಯೋರ್ವನಿಂದ ಸಹ ಖೈದಿಗೆ ಹಲ್ಲೆ

ಮಂಗಳೂರು: ನಗರದ ಕೊಡಿಯಾಲ್‌ ಬೈಲ್‌ ನ ಕಾರಾಗೃಹದಲ್ಲಿ ಒಬ್ಬ ವಿಚಾರಣಾಧೀನ ಖೈದಿಯೋರ್ವ ಸಹ ಖೈದಿಗೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮೂವರು ಸಹ ಕೈದಿಗಳ ಮೇಲೆ ಹಲ್ಲೆ ನಡೆಸಿದ ನಂತರ ವಿಚಾರಣಾಧೀನ ಖೈದಿ ಮುಹಮ್ಮದ್ ಆಸಿಫ್ ಎಂಬಾತ ಕಾರಾಗೃಹದ ಅಧೀಕ್ಷಕ ಶರಣಬಸಪ್ಪರ ಕಚೇರಿಯ ಮುಂದೆ ಏರುಧ್ವನಿಯಲ್ಲಿ ಜೋರಾಗಿ ಕೂಗಾಡಿ ‘ಎ’ ವಿಭಾಗದ ಎಲ್ಲಾ ಕೈದಿಗಳು ಹೊರಗೆ ಬರಬೇಕೆಂದು ಪ್ರೇರೇಪಿಸಿದ್ದ ಎನ್ನಲಾಗಿದೆ.

ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಪ್ರಕರಣ, ಇತರ ಕೆಲವು ಕೈದಿಗಳು ಜೈಲಿನ ಅಧಿಕಾರಿ, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *