ದುಬೈ: ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ ಶಾರ್ಜಾದ ಅಲ್ ಬತಾಯಿ ಬಿಸಿಸಿ ಕ್ರೀಡಾಂಗಣದಲ್ಲಿ ‘ಬದ್ರಿಯಾ ಪ್ರೀಮಿಯರ್ ಲೀಗ್ -ಸೀಸನ್ 8’ ಕ್ರಿಕೆಟ್ ಪಂದ್ಯಾಟ ಡಿ. 7ರಂದು ನಡೆಯಲಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಅಧ್ಯಕ್ಷ ಮೊಹಮ್ಮದ್ ಆಶಿಕ್, ಈ ಬಾರಿಯ ‘ಬದ್ರಿಯಾ ಪ್ರೀಮಿಯರ್ ಲೀಗ್-ಸೀಸನ್ 8’ರ ಟ್ರೋಫಿಯನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ. ಟೂರ್ನಮೆಂಟ್ ಯಶಸ್ವಿಯಾಗಿ ನಡೆಯಲು ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ,” ಎಂದರು.

ಯುಎಇಯ ಒಟ್ಟು ಐದು ಆಹ್ವಾನಿತ ಬಲಿಷ್ಠ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಲಿದೆ ಎಂದಿದ್ದಾರೆ.
ಜಹ್ನಾಝ್ ಹಾಗೂ ರಮೀಝ್ ಮಾಲಕತ್ವದ ‘ಡೈಮಂಡ್ XI ಬ್ರಿಗೇಡ್’, ಲತೀಫ್ BL, ಅರ್ಫಾ, ಝಹೀರ್ ಮಾಲಕತ್ವದ ‘ರಾಯಲ್ ಥಂಡರ್ಸ್ ಕುಡ್ಲ’, ಇಕ್ಬಾಲ್ ಮಾಲಕತ್ವದ ‘ಲಾಝ್ ಬ್ರದರ್ಸ್’, ಹನೀಫ್ ಮಾಲಕತ್ವದ ‘ಡಿಜಿಫೀಟ್ ಡೇರ್ ಡೆವಿಲ್ಸ್’ ಹಾಗೂ ಸೌದ್ ಮಾಲಕತ್ವದ ‘ಅಲ್ ದನಹ್ XI’ ತಂಡಗಳು ಪಂದ್ಯಾಟದಲ್ಲಿ ಸೆಣಸಾಡಲಿವೆ.

ಬದ್ರಿಯಾ ಫ್ರೆಂಡ್ಸ್ ಯುಎಇ ಕಳೆದ 12 ವರ್ಷಗಳ ಹಿಂದೆ ಆರಂಭಗೊಂಡಿರುವ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಸಂಸ್ಥೆಯು ರಕ್ತದಾನ, ಅಶಕ್ತರಿಗೆ ರೇಷನ್, ಮಂಗಳೂರು ಸುತ್ತಮುತ್ತ ಮಸೀದಿ, ಮದ್ರಸ ನಿರ್ಮಾಣಕ್ಕೆ ಸಹಾಯ-ಸಹಕಾರ ನೀಡುತ್ತಲೇ ಬಂದಿದೆ. ಯುಎಇಯಲ್ಲಿ ಫುಟ್ಬಾಲ್, ಕ್ರಿಕೆಟ್ ಸೇರಿದಂತೆ ಹಲವಾರು ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಜೊತೆಗೆ ಈ ಕ್ರೀಡೆಯಿಂದಾಗಿ ನಮ್ಮ ಸ್ನೇಹಿತರು, ಬಂಧುಗಳು ನಾವೆಲ್ಲರೂ ಜೊತೆಯಾಗಿದ್ದು, ಸೀಸನ್ 7ನ್ನು ಬಹಳ ಯಶಸ್ವಿಯಾಗಿ ಮುಗಿಸಿದ್ದೇವೆ. ಈಗ ಸೀಸನ್ 8ಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಆಶಿಕ್ ಅವರು ತಿಳಿಸಿದ್ದಾರೆ.

ಈ ಪಂದ್ಯಾಟವನ್ನು ನಡೆಸಲು ಆಶಿಕ್ ಅವರೊಂದಿಗೆ SK ಶಮೀರ್, ನವಾಝ್, ಅಲ್ತಾಫ್ ಬಿಕರ್ನಕಟ್ಟೆ, ಅಬ್ದುಲ್ ರೆಹ್ಮಾನ್, ಅಕ್ಬರ್, ಅನ್ವರ್, ಮೊಹಮ್ಮದ್ ಆಸೀಫ್, ಸಿನಾನ್ ಅರಫಾ, ಬೈರೋಝ್ ಹಾಗು ಬದ್ರಿಯಾ ಫ್ರೆಂಡ್ಸ್’ನ ಸದಸ್ಯರು ಸಹಕರಿಸುತ್ತಿದ್ದಾರೆ.



