Breaking
22 Mar 2026, Sun

ಎರ್ಮಾಲ್ ತೆಂಕದ ಬಳಿ ಟೈಯರ್ ಸ್ಫೋಟ: ಟೆಂಪೊ ಪಲ್ಟಿ

ಕಾಪು : ಎರ್ಮಾಲ್ ತೆಂಕದ ಬಳಿ ಟೈಯರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿಯಾದ ಘಟನೆ ಡಿ.4 ರಂದು ನಡೆದಿದೆ.

ಅಕ್ಕಿ ಮೂಟೆಗಳನ್ನು ಕೋಟೇಶ್ವರಿಂದ ಪಡುಬಿದ್ರೆಗೆ ತುಂಬಿಸಿಕೊಂಡು ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ.

ಘಟನೆಯ ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಟೆಂಪೋದಲ್ಲಿದ್ದ ಅಕ್ಕಿ ಮೂಟೆಗಳನ್ನು ಸುರಕ್ಷಿತವಾಗಿ ಖಾಲಿ ಮಾಡಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.

Leave a Reply

Your email address will not be published. Required fields are marked *