Breaking
6 May 2026, Wed

ಒಣ ಹುಲ್ಲಿಗೆ ಬೆಂಕಿ ತಗುಲಿ ಶಾಲಾ ಬಸ್‌ ಸುಟ್ಟು ಭಸ್ಮ

ಉಡುಪಿ: ಅಲೆವೂರು ಪ್ರಗತಿ ನಗರ ಪ್ರದೇಶದಲ್ಲಿ ಒಣಗಿದ ಹುಲ್ಲಿಗೆ ಬೆಂಕಿ ತಗುಲಿ ಸಮೀಪದಲ್ಲಿ ನಿಲ್ಲಿಸಿದ ಶಾಲಾ ಬಸ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನ. 30 ರಂದು ನಡೆದಿದೆ.

ಒಣ ಹುಲ್ಲಿಗೆ ಬೆಂಕಿ ಕಾಣಿಸಿಕೊಂಡಿದ್ದು ಜ್ವಾಲೆಗಳು ತೀವ್ರವಾಗಿ ಹರಡಿದ್ದು ಸಮೀಪದಲ್ಲಿ ನಿಲ್ಲಿಸಿದ್ದ ಖಾಸಗಿ ಶಾಲಾ ಬಸ್ ಶೀಘ್ರದಲ್ಲೇ ಬೆಂಕಿಗಾಹುತಿಯಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ವಿದ್ಯಾರ್ಥಿಗಳು ಬಸ್ಸಿನಲ್ಲಿ ಇರದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

Leave a Reply

Your email address will not be published. Required fields are marked *