ಗೋವಾ: ಕಳೆದ ಆರು ವರ್ಷಗಳಲ್ಲಿ ಪ್ರತಿ ದಿನ ಒಂದು ಚಾರೊಳಿ ಚುಟುಕು ತನ್ನ ಮಾತೃಭಾಷೆ ಕೊಂಕಣಿಯಲ್ಲಿ ಬರೆದು ಇಂದಿಗೆ ಎರಡುವರೆ ಸಾವಿರಕ್ಕೂ ಹೆಚ್ಚು ಚುಟುಕು ಕೊಂಕಣಿಯಲ್ಲಿ ಬರೆದು ಪ್ರಕಟಿಸಿದ ರೇಮಂಡ್ ಡಿಕೂನಾ ತಾಕೊಡೆ ಅವರಿಗೆ ಗೋವಾದ ಪನಜಿಯಲ್ಲಿ ಎಡಿಸಿ ಪ್ರಕಾಶನ ವತಿಯಿಂದ “ಚಾರೊಳಿ ಕಿಂಗ್” ಎಂಬ ಗೌರವ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಮಾಡಿ ಬಳಿಕ ಮಾತನಾಡಿದ ಅವರು ವಿಶಿಷ್ಠವಾದ ಪ್ರತಿಭೆಗಳು ಮೌನದಿಂದ ಅರಳುತ್ತವೆ. ಅದರ ಪರಿಮಳದ ಸ್ವಾದವನ್ನು ಪತ್ತೆಮಾಡಲು ಎಲೆಯ ಮರೆಯನ್ನು ಸ್ಮರಿಸಿ ನೋಡಿ ಪುರಸ್ಕರಿಸಬೇಕು ಎಂದರು.
ಗೋವಾದ ಕೊಂಕಣಿ ಅಕಾಡೆಮಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ಹಾಡುಗಾರರು ,ಚಿತ್ರಗೀತೆ ರಚನಕಾರ ಪ್ರಶಾಂತ್ ಇಂಗೊಲೆಯವರು ಮುಖ್ಯ ಅತಿಥಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಗ್ತೆಂ ಮೊಳಾಬ್ ಸಾಹಿತ್ಯ ಬಳಗದ ಹಿರಿಯ ಸಾಹಿತಿ ಅನಗ ಕಾಮತ್ ವಹಿಸಿದ್ದರು. ಮಾಜಿ ಸೈನಿಕ, ಸಾಹಿತ್ಯಿಕ, ಗೀತಕಾರ ಹಾಗೂ ಬಹುಭಾಷಾ ಹಾಡುಗಾರ–ಪತ್ರಕರ್ತ ಜೋನ್ ಆಗೇರ ಅವರು ಶುಭಾಶಯಗಳನ್ನು ತಿಳಿಸಿ ಅವಿನಾಶ್ ಕುಂಕೋಲ್ಕರ್ ಅವರನ್ನೂ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅನಗ ಕಾಮತ್ ಸ್ವಾಗತಿಸಿ, ಎಡಿಸಿ ಪ್ರಕಾಶನದ ಪ್ರತಿನಿಧಿ ಆನ್ನಿ ಡಿ ಕೊಲ್ವಾಲೆ ವಂದಿಸಿದರು. ಗ್ರೇಸಿಯಸ್ ಫುರ್ಟಾಡೋ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕವಿತಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಪ್ರಥಮ ಬಹುಮಾನವನ್ನು ಸಂದೇಶ ಬಾಂದೇಕರ್ ಕಾರವಾರ, ಸತ್ಯವಾನ ಜಗಲೆ ಗೋವ ದ್ವಿತೀಯ, ಸುನಿತ ಪೆಡ್ನೆಕರ್ ತೃತೀಯ ಮತ್ತು ಮೆಚ್ಚುಗೆ ಪಡೆದ ಕವಿಗಳು ಜೂಡ್ ಫೆರ್ನಾಂಡೀಸ್, ಆನ್ನ ಪೆರೆರಾ ರೊಡ್ರಿಗಸ್, ನಾಮ್‌ದೆರವ್ ಸುರ್ಲಿಕರ್,ಅವಿನಾಶ್ ಕುಂಕೋಲ್ಕರ್ ಅವರಿಗೆ ಸಿಕ್ಕಿತು.

ನಂತರ “ಉಗ್ತೆಂ ಮೊಳಾಬ್ ” ಸಾಹಿತ್ಯ ಸಂಸ್ಥೆಯ ಮಾಸಿಕ ಕವಿ ಗೋಷ್ಟಿ ನಡೆಯನ್ನು ಹಿರಿಯ ಕವಿ ಶಿತಲ್ ಸಾಲ್‌ಗಾಂವ್ಕರ್ ಅವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕವಿಗಳಾದ ಜೀತೆಂದ್ರ ಪಡ್ತೆ, ಜೋನ್ ಆಗೇರ್, ಸವಿತಾ ಆಗೇರ್, ಶೀತಲ್ ಸಾಲ್‌ಗೊಂನ್ಕಾರ್, ನಾಮ್‌ದೇವ್ ಸುರ್ಲಿಕರ್, ಅವಿನಾಶ್ ಕನ್ಕೊಲ್ಕರ್, ನಾಗರತ್ನ ಕುರ್ತಾರ್ದ್‌ಕರ್, ಶಾಮಲ್ ಪೆಡ್ನೆಕರ್, ಆನ್ನ ಪೆರೆರಾ, ಅನಗ ಕಾಮತ್, ಸ್ಮಿತ ವೆರ್ನೆಕರ್, ಆನ್ನಿ ಫೆರ್ನಾಂಡೀಸ್, ಸಂದೇಶ್ ಬಾಂದೇಕರ್, ಸತ್ಯಂ ಜಗಲೆ ಮತ್ತು ರೇಮಂಡ್ ಡಿಕೂನಾ ತಾಕೊಡೆ ಉಪಸ್ಥಿತರಿದ್ದರು.




