ಕಾಸರಗೋಡು: ಜಿಲ್ಲೆಯ ಪೆರ್ಲ , ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಬಳಿ ಬೀದಿ ನಾಯಿಗಳು ಗುಂಪಾಗಿ ಇತರ ನಾಯಿ ಹಾಗೂ ಜನರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣ ವರದಿಯಾಗಿದೆ.
ಇದರಿಂದ ಸಾವ೯ಜನಿಕ ವಲಯದಲ್ಲಿ ಆತಂಕ ಮನೆ ಮಾಡಿದ್ದು, ಜೀವ ಭಯದಿಂದ ಓಡಾಡುವ ಪರಿಸ್ಥಿತಿ ನಿಮಾ೯ಣವಾಗಿದೆ.

ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಇತ್ತ
ಬೆದ್ರಂಪಳ್ಳ ಪರಿಸರದಲ್ಲೂ ಬೀದಿ ನಾಯಿ ಕಂಡು ಬಂದಿದ್ದು, ಇತ್ತೀಚಿಗೆ ನಾಯಿಯೊಂದು ಇತರ ಪ್ರಾಣಿಗಳ ಮೇಲೆ ದಾಳಿ ಮಾಡಿತ್ತು ಎಂದು ತಿಳಿದು ಬಂದಿದೆ.





