ಬಂಟ್ವಾಳ : ಸಜೀಪ ನಡುವಿನ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಷಷ್ಟಿ ಪೂಜೆಯ ಅಂಗವಾಗಿ ಶ್ರೀ ದೇವರ ಬಲಿ ಉತ್ಸವ , ಕಟ್ಟೆ ಪೂಜೆ, ರಾಜಾಂಗಣ ಪ್ರಸಾದ ನೃತ್ಯ ಬಲಿಯು ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ,ರಾಮಕೃಷ್ಣ ಭಟ್ ಜಿ ,ಅರ್ಚಕ ಗಣಪತಿ ಮಹಾಬಲೇಶ್ವರ ಬಟ್, ಕೆ ರಾಧಾಕೃಷ್ಣ ಆಳ್ವ, ಪ್ರವೀಣ್ ಆಳ್ವ,ಕಿಶನ್ ಸೇನವ ,ಸುಧಾಕರ ಕೇಟಿ, ಪ್ರವೀಣ್ ಬಂಡಾರಿ , ಹರೀಶ್ ಬಂಗೇರ , ರೇವತಿ , ಬಾಬು ಪೂಜಾರಿ, ವಿಟ್ಟಲ ಅಮೀನ್ಪು, ರುಷೋತ್ತಮ ನಾಯ್ಕ , ಗೀತಾ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.





