ಬಂಟ್ವಾಳ: ಮುಗುಳಿಯ ಸಜೀಪ ಮುನ್ನೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಷಷ್ಟಿ ಅಂಗವಾಗಿ ಶ್ರೀ ದೇವರ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಅಶ್ವತ ಕಟ್ಟೆ ಪೂಜೆ, ರಾಜಾಂಗಣ ಪ್ರಸಾದ ಮಂತ್ರಾಕ್ಷತೆಯು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಶ್ರೀತಾಯ, ಅರ್ಚಕ ಕೃಷ್ಣ ಭಟ್ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ರವೀಂದ್ರ ಕಂಬಳಿ, ಪ್ರಕಾಶ್ ಚಂದ್ರ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಶಶಿರಾಜ ರಾವ್ ನೂಯಿ, ರಾಮಪ್ರಸಾದ್ ಪೂಂಜ, ಸುಬ್ರಾಯ ಕಾರಂತ, ಪರಮೇಶ್ವರ , ದೇವಿ ಪ್ರಸಾದ್ ಪೂಂಜ , ನ್ಯಾಯವಾದಿ ದಿನೇಶ್ ಭಂಡಾರಿ, ಎನ್ ಕೆ ಶಿವ, ಹರಿಪ್ರಸಾದ್ ಭಂಡಾರಿ, ಶ್ರೀನಿವಾಸ್ ನಾಯಕ್ , ಕಾವ್ಯಶ್ರೀ , ರಾಜೇಶ್ ಪೂಜಾರಿ, ಕವಿತಾ , ಧನಂಜಯ್ ಶೆಟ್ಟಿ , ಯಶವಂತ ದೇರಾ ಜೆ, ಲಿಂಗಪ್ಪ, ಗಿರೀಶ್ ಕುಮಾರ್, ವಿಶ್ವ ಭಾರತಿ ಯಕ್ಷಸಂಜೀವಿನಿ ರಿಜಿಸ್ಟರ್ ಮುಡಿಪು ಸಂಚಾಲಕ ಪ್ರಶಾಂತ ಹೊಳ್ಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





